ಸೈಫ್ ಅಲಿ ಖಾನ್ ಹೊಸ ಸಿನಿಮಾದ ಪೋಸ್ಟರ್ ವಿರುದ್ಧ ಸಿಡಿದೆದ್ದ ಹಿಂದೂಗಳು

1 min read

ಸೈಫ್ ಅಲಿ ಖಾನ್ ಹೊಸ ಸಿನಿಮಾದ ಪೋಸ್ಟರ್ ವಿರುದ್ಧ ಸಿಡಿದೆದ್ದ ಹಿಂದೂಗಳು

ಸೈಫ್ ಅಲಿ ಖಾನ್ ನಟನೆಯ ಹೊಸ ಸಿನಿಮಾ  ‘ಭೂತ್ ಪೊಲೀಸ್’ ನ  ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸೈಫ್ ಲುಕ್ ಚರ್ಚೆಗೆ ಗ್ರಾಸವಾಗಿದೆ.. ಹೌದು ಈ ಪೋಸ್ಟರ್‌ ನಲ್ಲಿ ಸೈಫ್ ಅಲಿ ಖಾನ್‌ನ ಅವತಾರ ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೆಂಡ ಕಾರ್ತಿದ್ದಾರೆ.

ಪೋಸ್ಟರ್‌ನಲ್ಲಿ ಕೊರಳಿಗೆ ರುದ್ರಾಕ್ಷಿ ಮಾಲೆ ತೊಟ್ಟಿರುವ ಸೈಫ್, ಕೈಯಲ್ಲಿ ವಿಚಿತ್ರವಾದ ಆಯುಧವೊಂದನ್ನು ಹಿಡಿದು ಅದಕ್ಕೂ ಮಾಲೆಗಳನ್ನು ಧರಿಸಿರುವ ಚಿತ್ರ ಪೋಸ್ಟರ್‌ನಲ್ಲಿದೆ. ಸೈಫ್‌ ನ ಹಿಂಭಾಗದಲ್ಲಿ ಸಾಧುವೊಬ್ಬರ ಚಿತ್ರವೂ ಇದೆ. ಈ ಚಿತ್ರವು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿಂದೂಗಳು ಗೌರವದಿಂದ ಕಾಣುವ ಮಾಲೆಗಳನ್ನು ಆಯುಧಕ್ಕೆ ಹಾಕಲಾಗಿದೆ. ಹಿಂಬಂದಿಯಲ್ಲಿ ಸಾಧುವಿನ ಚಿತ್ರವನ್ನು ಬಳಸಲಾಗಿದೆ ಇದು ಹಿಂದೂಗಳಿಗೆ ಮಾಡಿರುವ ಅವಮಾನ” ಎಂದು ವಾದಿಸಿದ್ದಾರೆ. ಪೋಸ್ಟರ್‌ನಲ್ಲಿ ಸಾಧುವಿನ ಚಿತ್ರವನ್ನಷ್ಟೆ ಏಕೆ ಬಳಸಲಾಗಿದೆ, ಮುಸ್ಲಿಂ ಮುಲ್ಲ ಚಿತ್ರವನ್ನೇಕೆ ಬಳಕೆ ಮಾಡಲಾಗಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಸೈಫ್ ಅಭಿನಯದ ಸಿನಿಮಾ ಟೀಕೆಗೆ ಗುರಿಯಾಗಿರೋದು ಇದೇನು ಮೊದಲಲ್ಲ.. ಈ ಹಿಂದೆ  ‘ತಾಂಡವ್’ ವೆಬ್ ಸರಣಿ ಕೂಡ ಇಂತಹದ್ದೇ ವಿವಾದ ಸೃಷ್ಟಿಸಿತ್ತು.. ಈ ವಿವಾದ ತೀವ್ರಗೊಂಡು ನಿರ್ದೇಶಕರು ಪರಾರಿಯಾಗುವಂತೆ ಆಗಿತ್ತು. ಅಷ್ಟೇ ಅಲ್ಲ ಬಹುನಿರೀಕ್ಷೆಯ ಪ್ರಭಾಸ್ ಅಭಿನಯದ ಆದಿಪುರುಷ್ ನಲ್ಲಿ  ಸೈಫ್ ಅಲಿ ಕಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ.. ಆದ್ರೆ ಈ ವಿಚಾರವಾಗಿಯೂ ಟೀಕೆಗೆ ಒಳಗಾಗಿದ್ದರು.

‘ಭೂತ್ ಪೊಲೀಸ್’ ಸಿನಿಮಾವು ಹಾರರ್ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಜೊತೆಗೆ ಅರ್ಜುನ್ ಕಪೂರ್, ಫಾತಿಮಾ ಸನಾ ಶೇಖ್, ಯಾಮಿ ಗುಪ್ತ, ಅಲಿ ಫಜಲ್, ಜಾವೇದ್ ಜೆಫ್ರಿ ನಟಿಸಿದ್ದಾರೆ. ಸಿನಿಮಾವು ಸೆಪ್ಟೆಂಬರ್ 10ಕ್ಕೆ  ಹಾಟ್ ಸ್ಟಾರ್‌ ನಲ್ಲಿ ಬಿಡುಗಡೆ ಆಗಲಿದೆ.

ಜುಲೈ 16ಕ್ಕೆ ರಿಲೀಸ್ ಆಗಲ್ಲ ‘KGF 2’ : ಪ್ರಶಾಂತ್ ನೀಲ್ ಹೇಳಿದ್ದೇನು..?

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd