Salar: ರಗಡ್ ಲುಕ್ಕಲ್ಲಿ ಸಲಾರ್ ಅಂಗಳಕ್ಕಿಳಿದ ಪಥ್ವಿರಾಜ್ ಸುಕುಮಾರನ್
ಸಲಾರ್ ಚಿತ್ರ ಶುರುವಾದಾಗಿನಿಂದಲೂ ಹಲವಾರು ಕಾರಣಗಳಿಗೆ ಸದ್ದು ಮಾಡುತ್ತಲೇ ಇದೆ. ಚಿತ್ರದಲ್ಲಿ ಪ್ರಭಾಸ್ ಒಂದು ತೂಕವಾದರೇ ವಿಲನ್ ಗಳದ್ದೇ ಮತ್ತೊಂದು ತೂಕ…
ಸಲಾರ್ ನಲ್ಲಿ ಮಲಯಾಳಂ ನ ಸೂಪರ್ ಸ್ಟಾರ್ ಪೃಥ್ವಿರಾಜ್ ನಟಿಸುತ್ತಾರೆ ಎನ್ನುವಂತ ಮಾತು ಹಲವಾರು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ ಚಿತ್ರ ತಂಡ ಅಧಿಕೃತವಾಗಿ ಎಲ್ಲಿಯೂ ತುಟಿಬಿಚ್ಚಿರಲಿಲ್ಲ.
ಇದೀಗ ನಟ ಪಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬದ ಪ್ರಯುಕ್ತ ಹೊಂಬಾಳೆ ಫಿಲಂ ಅಧಿಕೃತವಾಗಿ ಪೋಸ್ಟರ್ ರಿಲೀಸ್ ಮಾಡುವ ಚಿತ್ರ ಪ್ರೇಮಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಪೃಥ್ವಿರಾಜ್ ರಗಡ್ ಲುಕ್ ನೋಡಿದ್ರೆ ನೀವು ಅಚ್ಚರಿಗೊಳ್ಳುವುದು ಖಚಿತ. ಗಣಿ ದೂಳಿನ ಬಟ್ಟೆಯಲ್ಲಿ ಕಿವಿ, ಮೂಗಿಗೆ ಓಲೆ ಹಾಕಿಕೊಂಡು, ಕೊರಳಲ್ಲಿ ದಪ್ಪನೆಯ ಆಭರಣ ಧರಿಸಿ, ಎದುರಿನವರನ್ನ ಭಯಪಡಿಸುವಂತೆ ಲುಕ್ ಕೊಟ್ಟಿದ್ದಾರೆ. ಈ ಪಾತ್ರಕ್ಕೆ ವರ್ಧರಾಜ್ ಮನ್ನಾರ್ ಎಂದು ಹೆಸರಿಡಲಾಗಿದೆ.
Birthday Wishes to the most versatile @PrithviOfficial, Presenting ‘𝐕𝐚𝐫𝐝𝐡𝐚𝐫𝐚𝐣𝐚 𝐌𝐚𝐧𝐧𝐚𝐚𝐫’ from #Salaar.#Prabhas @VKiragandur @hombalefilms @shrutihaasan @IamJagguBhai @bhuvangowda84 @RaviBasrur @anbariv @shivakumarart @SalaarTheSaga #HBDPrithvirajSukumaran pic.twitter.com/GKDlwSqsv2
— Prashanth Neel (@prashanth_neel) October 16, 2022
ಸಲಾರ್ ಚಿತ್ರದಲ್ಲಿ ಚಿತ್ರದಲ್ಲಿ ಜಗಪತಿ ಬಾಬು ರಾಜಮನ್ನಾರ್ ಪಾತ್ರ ದಲ್ಲಿ ನಟಿಸುತ್ತಿದ್ದಾರೆ. ಎರಡು ಹೆಸರಿನ ಸಾಮ್ಯತೆ ನೊಡಿದರೇ ಪೃಥ್ವಿರಾಜ್ ಜಗಪತಿ ಬಾಬು ಮಗನ ಪಾತ್ರ ನಿರ್ವಹಿಸುತ್ತಿರಬಹುದು ಎಂದು ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಇನ್ನೂ ಪೃಥ್ವಿರಾಜ್ ಲುಕ್ ನೋಡಿ ಥ್ರಿಲ್ ಆಗಿರುವ ಪ್ರೇಕ್ಷಕರು ಪ್ರಭಾಸ್ ಮತ್ತು ಸುಕುಮಾರನ್ ಅವರನ್ನ ಒಂದೇ ಸ್ಕ್ರೀನ್ ನಲ್ಲಿ ಎದುರು ಬದುರು ನೋಡಲು ತವಕಿಸುತ್ತಿದ್ದಾರೆ.
ಹೊಂಬಾಳೆ ಬ್ಯಾನರ್ ನಲ್ಲಿ ಬರುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಐದು ಆಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಜಗಪತಿ ಬಾಬು, ಈಶ್ವರಿ ರಾವ್, ಅವರಂಥ ಘಟಾನುಘಟಿ ನಟರ ಜೊತೆಗೆ ಇದೀಗ ಪೃಥ್ವಿರಾಜ್ ಕೂಡ ಸೇರಿಕೊಂಡಿದ್ದಾರೆ.
Salaar: hombale films unveils first look of Prithviraj Sukumaran’s Vardharaja Mannaar on his birthday