ಎರಡು ಪಾರ್ಟ್ ಗಳಲ್ಲಿ ಬರಲಿದೆ ಸಲಾರ್ !! – ಡಾರ್ಲಿಂಗ್ ಫ್ಯಾನ್ಸ್ ಫುಲ್ ಖುಷ್
2022 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಯಂಗ್ ರೆಬೆಲ್ ಸ್ಟಾರ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಕೂಡ ಒಂದು. ನರಾಚಿ ಸೃಷ್ಟಿಕರ್ತ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತೆರೆ ಕಾಣಲಿದೆ. ಈ ಚಿತ್ರವನ್ನ ನೋಡುವುದಕ್ಕೆ ಪ್ರಭಾಸ್ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಹೈ ಲೆವೆಲ್ ಆಕ್ಷನ್ ಸೀಕ್ವೆನ್ಸ್ ಸಿನಿಮಾ ಸ್ವಲ್ಪ ನಿಧಾನವಾಗಿ ಶೂಟ್ ಆಗುತ್ತಿದೆ.
ಇತ್ತೀಚೆಗೆ ಹರಿದಾಡುತ್ತಿರುವ ಗಾಸಿಪ್ ಸುದ್ದಿಯ ಪ್ರಕಾರ ಸಲಾರ್ ಸಿನಿಮಾ ಬಾಹುಬಲಿ ಮತ್ತು ಕೆಜೆಎಫ್ ರೀತಿ ಎರಡು ವಿಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನುವುದು . ಇದನ್ನ ಕೇಳಿ ಡಾರ್ಲಿಂಗ್ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಸಲಾರ್ ಎರಡು ಪಾರ್ಟ್ ಗಳಲ್ಲಿ ಬರಲಿದೆ ಅಂತ ತೆಲುಗು ಮಾಧ್ಯಮಗಳು ಖಚಿತವಾಗಿ ಸುದ್ದಿ ಮಾಡುತ್ತಿವೆ ಆದರೆ ಕುರಿತು ಪ್ರಶಾಂತ್ ನೀಲ್ ಹೊಂಬಾಳೆ ಫಿಲಂಸ್ ಅಥವಾ ಪ್ರಭಾಸ್ ಯಾರೊಬ್ಬರಾಗಲಿ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ತೆರೆಯ ಮೇಲೆ ಅದ್ದೂರಿಯಾಗಿ ಕತೆ ಹೇಳುವ ಪ್ರಶಾಂತ್ ನೀಲ್ ಕೆಜೆಫ್ ರೀತಿಯೇ ಸಲಾರ್ ಸಿನಿಮಾವನ್ನ ಬ್ರಾಂಡ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. Salar coming in two parts !! – Darling Fans Full Khush
ಪ್ರಭಾಸ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ‘ಬಾಹುಬಲಿ’ ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಅಂತಹದ್ದೇ ದಾಖಲೆಯನ್ನು ‘ಸಲಾರ್’ ಕೂಡ ಸೃಷ್ಟಿಸಬೇಕು. ‘ಸಲಾರ್’ ಫ್ರಾಂಚೈಸಿ ಆಗಿ ರೂಪುಗೊಳ್ಳಬೇಕು ಅಂತ ಚಿತ್ರತಂಡ ನಿರ್ಧರಿಸಿದೆ ಎನ್ನುವ ಮಾತುಗಳು ಹರಿದಾಡಿವೆ.
ಇತ್ತೀಚೆಗಷ್ಟೆ ಚಿತ್ರ ತಂಡ ಸಲಾರ್ ಸಿನಿಮಾದ ನಾಯಕಿ ಶೃತಿ ಹಾಸನ್ ಹುಟ್ಟು ಹಬ್ಬಕ್ಕೆ ವಿಶೇಷ ಪೋಸ್ಟರ್ ಒಂದನ್ನ ರಿಲೀಸ್ ಮಾಡಿ ಶುಭ ಹಾರೈಸಿದೆ. ಸಲಾರ್ ಗೂ ಮೊದಲು ಕೆಜಿಎಫ್ 2 ಚಿತ್ರ ಬಿಡುಗಡೆಯಾಗಬೇಕಿದೆ. ಕೆಜಿಎಫ್ ನಂತರ ಸಲಾರ್ ಬಿಡುಗಡೆಯಾಗಲಿದ್ದು ಈ ದಸರಾ ವೇಳೆಗೆ ಬರಲಿದೆ ಎನ್ನುವ ಟಾಕ್ ಕೇಳಿ ಬರುತ್ತಿದೆ.