ಬೆಂಗಳೂರು : ಇನ್ನೂ 6 ತಿಂಗಳು ಸೇವೆ ಸಲ್ಲಿಸಲು ಸಿದ್ದರಾಗಿ ಎಂದು ವೈದ್ಯರಿಗೆ ಕೋವಿಡ್ ಉಸ್ತುವರಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ, ಇಂದು ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆರು ತಿಂಗಳು ಇದೆ ರೀತಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ದಾರಗಿ ಇರುವಂತೆ ವೈದ್ಯರಿಗೆ ಆರ್.ಅಶೋಕ್ ಸೂಚನೆ ನೀಡಿದ್ದಾರೆ.
ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಸಿಬ್ಬಂದಿ ಭಯ ಪಡುತ್ತಿದ್ದಾರೆ. ಹಾಗಾಗಿ ಪಿಪಿ ಕಿಟ್ ಬಳಕೆ ಮಾಡಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಇನ್ನೂ ಉತ್ತಮ ಗುಣಮಟ್ಟದ ಊಟ ನೀಡಲು ಸೂಚನೆ, ಊಟದ ಜೊತೆಗೆ ಜೇನು ತುಪ್ಪ, ನೀಡಲು ಸೂಚನೆ ನೀಡಲಾಗಿದೆ. ಅಲ್ಲದೆ ಊಟದ ನೀಡುವಂತೆ ಇಸ್ಕಾನ್ ಜೊತೆ ಮಾತುಕತೆ ನಡೆಸಲಿದ್ದೇವೆ.
ಟೆಸ್ಟ್ ಮಾಡಿಸಿ ವರದಿ ಬಂದ ಮೇಲೆ ಕೊರೊನಾ ಪಾಸಿಟಿವ್ ಇದ್ದರೆ , ಅದನ್ನು ನೇರವಾಗಿ ಸೋಂಕಿತರಿಗೆ ಹೇಳುವಂತಿಲ್ಲ. ಪಾಸಿಟಿವ್ ಎಂದಾಕ್ಷಣ ಸೋಂಕಿತರು ರಸ್ತೆಗೆ ಬರುತ್ತಿದ್ದಾರೆ. ಹಾಗಾಗಿ ಖಾಸಗಿ ಆಸ್ಪತ್ರೆಯವರಾಗಲಿ, ಅಥಾವ ವೈದ್ಯರಾಗಲಿ ಪಾಸಿಟವ್ ಬಂದ ತಕ್ಷಣ ಅದರ ಬಗ್ಗೆ ಬಿಬಿಎಂಪಿ ಗೆ ಮಾಹಿತಿ ನೀಡಬೇಕು.
ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಕೆಲ ಆಸ್ಪತ್ರೆಗಳಲ್ಲಿ ಸೇರಿಸುತ್ತಿಲ್ಲ . ಆದ್ದರಿಂದ ಕೊರೊನಾ ಕಾಣಿಸಿಕೊಂಡ ವಾರ್ಡ್ ನಲ್ಲೆ ಸೋಂಕಿತರಿಗೆ ಯಾವ ಆಸ್ಪತ್ರೆಗೆ ಹೋಗಬೇಕು ಎಂದು ತಿಳಿಸಲಾಗುತ್ತದೆ. ರೋಗ ಲಕ್ಷಣಗಳು ಇಲ್ಲದವರನ್ನು ಕೇರ್ ಸೆಂಟರ್ ಗಳಿಗೆ ಕಳಿಸಲಾಗುತ್ತದೆ. ಸೋಂಕು ಪತ್ತೆಯಾದರೆ ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಐಸಿಎಂಆರ್ ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡಬೇಕು. ಅದರನ್ವಯ ಆಸ್ಪತ್ರೆಗೆ ದಾಖಲ ಮಾಡಲಾಗುವುದು.
ಪ್ರತಿ ವಾರ್ಡ್ ನಲ್ಲೂ 10 ಎನ್.ಜಿ. ಓ ಗಳನ್ನು ಗುರುತಿಸಲು ಸರ್ಕಾರ ಮುಂದಾಗಿದೆ. ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಪ್ರದೇಶದಲ್ಲಿ ಅರಿವ ಮೂಡಿಸಲು . ಜೊತೆಗೆ ಸೋಂಕಿತರನ್ನು ವಿಲನ್ ತರ ನೋಡದೆ ಇರುವಂತೆ ಅರಿವು ಮೂಡಿಸಲು ಎನ್.ಜಿ.ಓ ಗುರುತಿಸಲಾಗುತ್ತಿದೆ.








