Bollywood : ಸಲ್ಮಾನ್ ಖಾನ್ ಸಿನಿಮಾದಲ್ಲಿ 10 ನಾಯಕಿಯರು..!!! ರಶ್ಮಿಕಾ , ಸಮಂತಾ , ಪೂಜಾ ಹೆಗ್ಡೆಗೂ ಚಾನ್ಸ್..??

1 min read

ಸಲ್ಮಾನ್ ಖಾನ್  ಸಿನಿಮಾದಲ್ಲಿ 10 ನಾಯಕಿಯರು..!!! ಯಾರ್ಯಾರು..??

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಇದೀಗ  ನೋ ಎಂಟ್ರಿ ಮೇ ಎಂಟ್ರಿ  ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ..

ಸಲ್ಮಾನ್ ಖಾನ್ ಅವರ ಅಭಿನಯದ ನೋ ಎಂಟ್ರಿ ಸಿನಿಮಾ  2005 ರಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು..

ಈ ಸಿನಿಮಾದಲ್ಲಿ ಅನಿಲ್ ಕಪೂರ್ ಮತ್ತು ಫರ್ದೀನ್ ಖಾನ್ ಅವರೂ ಕೂಡ ನಟಿಸಿದ್ದರು.. ಇದೀಗ ಈ ಸಿನಿಮಾದ ಸೀಕ್ವೆಲ್ ಬರುತ್ತಿದೆ.. ಇದೀಗ ಈ ಸಿನಿಮಾಗೆ  ಟೈಟಲ್  ನೋ ಎಂಟ್ರಿ ಮೇ ಎಂಟ್ರಿ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ.

ಈ ಸಿನಿಮಾದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್ ಮತ್ತು ಫರ್ದೀನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ವಿಶೇಷ ಅಂದ್ರೆ ಈ ಸಿನಿಮಾದಲ್ಲಿ 10 ಮಂದಿ ನಾಯಕಿಯರು ಇರಲಿದ್ದಾರೆ.. ಒಟ್ಟು 9 ಜನ ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷ ಪಾತ್ರದಲ್ಲಿ ಮತ್ತೊಬ್ಬ ನಾಯಕಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಅನೀಸ್ ಬಾಜ್ಮಿ ಈಗಾಗಲೇ ನಾಯಕಿಯರ ಆಯ್ಕೆಯನ್ನು ಮಾಡಿದ್ದು, ದಕ್ಷಿಣದ ಸುಂದರಿ ಸಮಂತಾ ರುತ್ ಪ್ರಭು ಅವರ ಹೆಸರೂ ಪಟ್ಟಿಯಲ್ಲಿದೆ ಎನ್ನಲಾಗ್ತಿದೆ. ಹತ್ತು ಮಂದಿ ನಾಯಕಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ  ಇರಲಿದ್ದಾರೆ ಎನ್ನಲಾಗ್ತಿದೆ. ಇತರರು ಪೂಜಾ ಹೆಗ್ಡೆ ಮತ್ತು ತಮನ್ನಾ ಭಾಟಿಯಾ. ಜೊತೆಗೆ ಬಾಲಿವುಡ್ ತಾರೆ ಜಾಕ್ವೆಲಿನ್ ಫೆರ್ನಾಂಡಿಸ್ ಈಗಾಗಲೇ ಚಿತ್ರದಲ್ಲಿದ್ದಾರೆ.

ಸದ್ಯ ಚಿತ್ರದ ಚಿತ್ರಕಥೆ ಪೂರ್ಣಗೊಂಡಿದ್ದು, ಸಲ್ಮಾನ್ ಖಾನ್ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೀಗ 10 ನಾಯಕಿಯರನ್ನು ಆಯ್ಕೆ ಮಾಡಲಾಗಿದ್ದು, ಅನೀಸ್ ಬಾಜ್ಮಿ ಅವರು ನಾಯಕಿಯರೇ ಫೈನಲ್ ಆಗಿ ನೋ ಎಂಟ್ರಿ ಮೇ ಎಂಟ್ರಿ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd