ಕತ್ರಿನಾಗೆ ಮಾಜಿ ಲವರ್ಸ್ ಕೊಟ್ರು ದುಬಾರಿ ಗಿಫ್ಟ್ಸ್ salman-khan saaksha tv
ಕತ್ರಿನಾ ಕೈಫ್-ವಿಕ್ಕಿ ಕೌಶಲ ಮದುವೆ ಇದೀಗ ಬಿ-ಟೌನ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.
ಮದುವೆಯನ್ನು ಗೌಪ್ಯವಾಗಿಟ್ಟಿದ್ದ ಜೋಡಿ, ನಂತರ ಸಾಲು ಸಾಲು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಮಧ್ಯೆ ಕುತೂಹಲಕಾರಿ ಸುದ್ದಿಯೊಂದು ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ರಾಜಸ್ಥಾನದಲ್ಲಿ ನಡೆದ ಕತ್ರಿನಾ ವಿಕ್ಕಿ ಮದುವೆಯಲ್ಲಿ ಅವರ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಆದ್ರೆ ಈ ಮದುವೆಗೆ ಬಾಲಿವುಡ್ ಮಂದಿ ಹೋಗಿದ್ರಾ ಅನ್ನೋ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಆದರೇ ಈ ಮಧ್ಯೆ ಈ ಜೋಡಿಗೆ ಹಲವು ಬಾಲಿವುಡ್ ಸ್ಟಾರ್ ಗಳು ದುಬಾರಿ ಗಿಫ್ಟ್ ಗಳನ್ನ ಕೊಟ್ಟಿದ್ದಾರೆ ಅನ್ನೋ ಸುದ್ದಿ ಟಿ ಟೌನ್ ನಲ್ಲಿ ಹರಿದಾಡುತ್ತಿದೆ.
ಅದರಲ್ಲೂ ಕತ್ರಿನಾ ಅವರ ಮಾಜಿ ಲವರ್ ಗಳಾದ ರಣಬೀರ್ ಕಪೂರ್ ಮತ್ತು ಸಲ್ಮಾನ್ ಖಾನ್ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಉಡುಗೊರೆಗಳನ್ನ ನೀಡಿದ್ದಾರೆ.
ಮೂಲಗಳ ಪ್ರಕಾರ.. ಕತ್ರೀನಾ ಅವರ ಮಾಜಿ ಗೆಳೆಯ ರಣಬೀರ್ ಕಪೂರ್ 2.7 ಕೋಟಿ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇತ್ತ ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್, ಮೂರು ಕೋಟಿ ರುಪಾಯಿ ರೇಂಜ್ ರೋವರ್ ಕಾರು ಗಿಫ್ಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಸಲ್ಮಾನ್ ಜೊತೆ ಕತ್ರಿನಾಗೆ ಲವ್ ಆಪೇರ್ ಇತ್ತು. ಸಲ್ಲು ಜೊತೆ ಬ್ರೇಕಪ್ ಆದ ಬಳಿಕ ಕತ್ರಿನಾ ರಣಬೀರ್ ಜೊತೆ ಸೇರಿದ್ದರು.
ಈ ಇಬ್ಬರು ಮುಂಬೈನಲ್ಲಿ ಪ್ಲಾಟ್ ಖರೀದಿಸಿ ಅದರಲ್ಲೇ ವಾಸವಾಗಿದ್ದರು ಎಂದು ಆ ಸಮಯದಲ್ಲಿ ವರದಿಯಾಗಿತ್ತು.
ಇನ್ನು ಸಲ್ಮಾನ್ ಮತ್ತು ರಣಬೀರ್ ಜೊತೆಗೆ ಆಲಿಯಾ ಭಟ್ ಕೂಡ ಕತ್ರಿನಾಗೆ 1 ಲಕ್ಷ ರೂಪಾಯಿ ಮೌಲ್ಯದ ಸುಗಂಧ ದ್ರವ್ಯದ ಬುಟ್ಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಶಾರುಖ್ ಖಾನ್ 1.5 ಲಕ್ಷ ರೂಪಾಯಿ ಮೌಲ್ಯದ ಪೇಂಟಿಂಗ್ ಕೊಟ್ಟಿದ್ದಾರಂತೆ.
ಹೃತಿಕ್ ರೋಷನ್, ವಿಕ್ಕಿಗೆ 3 ಲಕ್ಷ ರೂಪಾಯಿ ಮೌಲ್ಯದ BMW G310R ಬೈಕ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.