ದಿಯಾ ಮಿರ್ಜಾ ತಾಯಿಯ ಜೀವ ಉಳಿಸಲು ಸಲ್ಮಾನ್ ಖಾನ್ ಸಹಾಯ
ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದಿಯಾ ಸಲ್ಮಾನ್ ಖಾನ್ ಅವರನ್ನು ಟ್ವೀಟ್ ಮೂಲಕ ಹೊಗಳಿದ್ದಾರೆ. ತಾಯಿಯ ಜೀವ ಉಳಿಸಲು ಸಲ್ಮಾನ್ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಲ್ಮಾನ್ ರಾಖಿ ಸಾವಂತ್ ತಾಯಿಗೆ ಕೂಡ ಸಹಾಯ ಮಾಡಿದ್ದರು. ರಾಖಿಯ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಿವುಡ್ ನಟಿ ದಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ತಮ್ಮ ಎರಡನೇ ವಿವಾಹದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ವೈಭವ್ ರೇಖಿ ಅವರನ್ನು ವಿವಾಹವಾದರು. ಅಷ್ಟೇ ಅಲ್ಲ ದಿಯಾ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ದಿಯಾ ಮತ್ತು ಸಲ್ಮಾನ್ ಖಾನ್ ಉತ್ತಮ ಸ್ನೇಹಿತರು. ತಾಯಿಯ ಜೀವ ಉಳಿಸಲು ಸಲ್ಮಾನ್ ಸಹಾಯ ಮಾಡಿದ್ದಾರೆ ಎಂದು ದಿಯಾ 2015 ರಲ್ಲಿ ಟ್ವೀಟ್ ನಲ್ಲಿ ತಿಳಿಸಿದ್ದರು.
2015 ರಲ್ಲಿ ಸಲ್ಮಾನ್ ಖಾನ್ ತಾಯಿಯ ಜೀವ ಉಳಿಸಲು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ದಿಯಾ ಟ್ವೀಟ್ ಮೂಲಕ ತಿಳಿಸಿದ್ದರು. ಅದೇ ವರ್ಷ, ಸಲ್ಮಾನ್ ಜಿಂಕೆಗಳನ್ನು ಬೇಟೆಯಾಡಿದ ಆರೋಪದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ್ದರು. ಈ ಟ್ವೀಟ್ ನಂತರ ದಿಯಾ ಇನ್ನೊಮ್ಮೆ ಟ್ವೀಟ್ ಮಾಡಿ ‘ನನ್ನ ಹಿಂದಿನ ಟ್ವೀಟ್‌ಗೆ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಉತ್ತಮ ಸ್ನೇಹಿತ ಮತ್ತು ಸ್ನೇಹಿತರಾಗಿ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ವರದಿಗಳ ಪ್ರಕಾರ, ಒಂದು ದಿನ ಇದ್ದಕ್ಕಿದ್ದಂತೆ ದಿಯಾಳ ತಾಯಿಯ ಆರೋಗ್ಯ ಹದಗೆಟ್ಟಿತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಮಯದಲ್ಲಿ ಸಲ್ಮಾನ್ ಸಹ ದಿಯಾ ಜೊತೆಗಿದ್ದರು.
ಇತ್ತೀಚೆಗೆ, ದಿಯಾ ತನ್ನ ಗರ್ಭಧಾರಣೆಯ ಬಗ್ಗೆ ತನ್ನ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪುಟ್ಟ ಅತಿಥಿ ಈ ಜಗತ್ತಿಗೆ ಬರುವುದನ್ನು ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ದಿಯಾ ಮತ್ತು ವೈಭವ್ ಫೆಬ್ರವರಿಯಲ್ಲಿ ವಿವಾಹವಾದರು. ದಿಯಾ ತನ್ನ ಮೊದಲ ಪತಿಯಿಂದ ಮಗಳನ್ನು ಸಹ ಹೊಂದಿದ್ದಾರೆ.
ಮಸ್ಕ್ ಮೆಲನ್ ಜ್ಯೂಸ್ ( ಕರಬೂಜ ಹಣ್ಣಿನ ಜ್ಯೂಸ್) https://t.co/YpaaM8RGBH
— Saaksha TV (@SaakshaTv) April 2, 2021
ಕಸೂರಿ ಮೇಥಿಯ ಆರೋಗ್ಯ ಪ್ರಯೋಜನಗಳು https://t.co/nPgU2tHyrz
— Saaksha TV (@SaakshaTv) April 2, 2021
ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಅನಾವರಣ – ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳಿಗೆ ಕೊರಗಜ್ಜನಿಂದ ಶಿಕ್ಷೆ https://t.co/QMJpOuFdYv
— Saaksha TV (@SaakshaTv) April 2, 2021
ಸುಂದರ ಪತ್ನಿ ಇರುವ ಗುಡ್ ಫಾರ್ ನಥಿಂಗ್ ವ್ಯಕ್ತಿ ಎಂಬ ಟ್ರೋಲ್ ಗೆ ಅಭಿಷೇಕ್ ಬಚ್ಚನ್ ನಿಂದ ಕ್ಲಾಸಿ ರಿಪ್ಲೈ !https://t.co/6yBuKUp0vO
— Saaksha TV (@SaakshaTv) April 1, 2021
#Salmankhan #diyamirza