ನನ್ನ ಮೇಲೆ 3 ಬಾರಿ ಅತ್ಯಾಚಾರ ನಡೆದಿತ್ತು : ಸಲ್ಮಾನ್ ಮಾಜಿ ಪ್ರೇಯಸಿ ಸೋಮಿ..!
ಮುಂಬೈ: ಇತ್ತೀಚೆಗೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅವರು ತಾನು ಸಲ್ಮಾನ್ ಖಾನ್ ಅವರನ್ನ ಮದುವೆಯಾಲೆಂದೇ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದೆ ಎಂದು ಹೇಳಿಕೊಂಡಿದ್ದ ಸುದದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸೋಮಿ ತಮ್ಮ ಜೀವನದ ಕರಾಳ ಅತ್ಯವನ್ನ ಬಿಚ್ಚಿಟ್ಟಿದ್ಧಾರೆ.
ಅಪ್ಪು ಗೆ ದಿನಕರ್ ತೂಗುದೀಪ್ ಆಕ್ಷನ್ ಕಟ್ ಹೇಳೋದು ಪಕ್ಕಾ..!
ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋಮಿ ಅವರು ಚಿಕ್ಕವರಿದ್ದಾಗ ಅವರ ಮೇಲೆ 3 ಬಾರಿ ಅತ್ಯಾಚಾರ ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ. ಹೌದು 5 ವರ್ಷದವಳಿದ್ದಾಗ ಮೊದಲ ಬಾರಿ ಪಾಕಿಸ್ತಾನದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಹೀಗೆ ಮೂರು ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಸಂದರ್ಭದಲ್ಲಿ ನಾನು ನನ್ನ ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದೆ. ಆದರೆ ಅವರು ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡ ಎಂದು ಹೇಳಿದ್ದರು. ಹೀಗಾಗಿ ಇದೂವರೆಗೂ ನಾನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ ಎಂದಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಲಿಂಗ ತಾರತಮ್ಯ : ಸಾರ್ವಜನಿಕವಾಗಿ ಹಾಡುವ ಸ್ವಾತಂತ್ರವನ್ನ ಕಸಿದ ಸರ್ಕಾರ..!
5 ವರ್ಷದವಳಿದ್ದಾಗ ಪಾಕಿಸ್ತಾನದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿತ್ತು. ಆದ್ರೆ ನನ್ನ ಮೇಲೆ ನಡೆದಿದ್ದ ದೌರ್ಜನ್ಯ ಇಷ್ಟಕ್ಕೆ ನಿಲ್ಲಲಿಲ್ಲ. ನಾನು 9 ವರ್ಷದವಳಾಗಿದ್ದಾಗಲೂ ನ್ನ ಮೇಲೆ ಅತ್ಯಾಚಾರ ನಡೆದಿತ್ತು. ನಂತರ 14ನೇ ವಯಸ್ಸಿನಲ್ಲಿಯೂ ನಾನು ಮತ್ತೆ ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂದಿದ್ದಾರೆ.
ಸುಮಾರು 8 ವರ್ಷಗಳ ಕಾಲ ಸಲ್ಮಾನ್ ಹಾಗೂ ಸೋಮಿ ಡೇಟಿಂಗ್ ಮಾಡುತ್ತಿದ್ದರು. ಇನ್ನೇನು ಮದುವೆಯೂ ಆಗಲಿದ್ದಾರೆ ಎನ್ನಲಾಗಿತ್ತು. ಆದ್ರೆ ಇವರಿಬ್ಬರ ಸಂಬಂಧ ಮುರಿದುಬಿದ್ದಿತ್ತು. ಅದಾದ ನಂತರದಿಂದ ಸೋಮಿ NGO ನಡೆಸಿಕೊಂಡಿದ್ದಾರೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ.