ಬಿಗ್ ಬಾಸ್ ಗೆ ಗುಡ್ ಬೈ ಹೇಳ್ತಾರಾ ‘ಬಾದ್ ಷಾ’..?

1 min read

ಬಿಗ್ ಬಾಸ್ ಗೆ ಗುಡ್ ಬೈ ಹೇಳ್ತಾರಾ ‘ಬಾದ್ ಷಾ’..?

ಬಿಗ್ ಬಾಸ್ ಜನಪ್ರಿಯ  ರಿಯಾಲಿಟಿ ಶೋ ಬಿಗ್ ಬಾಸ್  ಕಿರುತೆರೆ ಪ್ರೇಕ್ಷಕರ ಫೇವರೇಟ್ ಶೋ. ಬಿಗ್ ಬಾಸ್ ಸ್ಪರ್ಧಿಗಳಿಗಾಗಿ ಶೋ ನೋಡ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಬಾದ್ ಷಾ ಕಿಚ್ಚ ಸುದೀಪ್ ಗಾಗಿ ಬಿಗ್ ಬಾಸ್ ನೊಡ್ತಾರೆ ನಮ್ಮ ಜನ. ಸುದೀಪ್ ಅವರನ್ನ ಬಿಟ್ರೆ ಆ ಜಾಗದಲ್ಲಿ ಮತ್ತೆ ಯಾರನ್ನೂ ನೋಡೋಕೆ ಇಷ್ಟ ಪಡೋದಿಲ್ಲ. ನೋ ವೇ ಚಾನ್ಸೇ ಇಲ್ಲ.Sudeepa

ಇದೀಗ ನಮ್ಮ ಅಭಿನಯ ಚಕ್ರವರ್ತಿ ಬಿಗ್ ಬಾಸ್ ಗಿಂತಲೂ ದೊಡ್ಡ ರಿಯಾಲಿಟಿ ಶೋನ ನಿರೂಪಣೆ ಮಾಡೋದಕ್ಕೆ ಹೊರಟಿದ್ದಾರೆ. ಹೌದು  ಮೂಲಗಳ ಪ್ರಕಾರ ಬಿಗ್ ಬಾಸ್ ಹಾಗೂ ಇನ್ನಿತರೇ ಎಲ್ಲಾ ರಿಯಾಲಿಟಿ ಶೋಗಳಿಗಿಂತಲೂ ದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲೇ ಬರಲಿದ್ದು, ಇದರ ಹೋಸ್ಟ್ ಆಗಲಿದ್ದಾರೆ ಕಿಚ್ಚ ಸುದೀಪ್. ಅದು ಕೂಡ ನಮ್ಮ ಕಿಚ್ಚ ಸುದೀಪ್ ಅವರ ಫೇವರೇಟ್ ಹಾಬಿ ರಿಲೀಟೆಡ್.

ಹೌದು ಮೂಲಗಳ ಪ್ರಕಾರ ದೊಡ್ಡ ನೆಟ್ವರ್ಕ್ ಒಂದು ದೊಡ್ಡ ಮಟ್ಟದಲ್ಲಿ ಕುಕ್ಕಿಂಗ್ ಶೋ ತರಲು ಹೊಟಿದ್ದು, ಇದು ಬರೋಬ್ಬರಿ 4 ಭಾಷೆಗಳಲ್ಲಿ ಒಟ್ಟಿಗೆ ಪ್ರಸಾರವಾಗಲಿದೆ. ಇದನ್ನ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ ಕಿಚ್ಚ ಸುದೀಪ್ ಗೆ ನಟನೆ  ಹೊರತಾಗಿ ಕ್ರಿಕೆಟ್ ಹಾಗೂ ಕುಕ್ಕಿಂಗ್ ಮೇಲೆ ಹೆಚ್ಚು ಒಲವಿದೆ. ಈ ವಿಚಾರ ಎಲ್ರಿಗೂ ಗೊತ್ತೇ ಇದೆ. ಅಲ್ದೇ ಅವರು ಸ್ಟ್ರೆಸ್ ಫ್ರ ಆಗುವುದಕ್ಕೂ ಕುಕ್ಕಿಂಗ್ ಮಾಡ್ತಾರೆ, ಇದು ಅವರು ಮೋಸ್ಟ್ ಫೇವರೇಟ್ ಹಾಬಿ ಕೂಡ. ಅಷ್ಟೇ ಅಲ್ಲ ತಮ್ಮ ಮನೆಯಲ್ಲಿ ಸುದೀಪ್ ಅವರು ತಮಗಾಗಿ ಪ್ರತ್ಯೇಕ ಕಿಚನ್ ಕೂಡ ಹೊಂದಿದ್ದಾರೆ.

ಕಿಚ್ಚನಿಗೆ ಕುಕ್ಕಿಂಗ್ ಮೇಲಿನ ಪ್ರೀತಿಯಿಂದಾಗಿ ಅವರು ಈ ಕುಕ್ಕಿಂಗ್ ಶೋಗೆ ಜೀವಕಳೆ ತುಂಬಲಿದ್ದಾರೆ. ಇಷ್ಟು ದಿನ ಕಿರುತೆರೆ ಆನ್ ಸ್ಕ್ರೀನ್ ನಲ್ಲಿ ಸ್ಪರ್ಧಿಗಳ ನ್ಯಾಯ ಪಂಚಾಯತಿ ಮಾಡುತ್ತಿದ್ದ ಬಾದ್ ಶಾ ಇನ್ಮುಂದೆ ಕುಕ್ಕಿಂಗ್ ಸೋ ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕ್ಯೂರಿಯಾಸಿಟಿಯು ಇದೆ.

ಅಂದ್ಹಾಗೆ 4 ಭಾಷೆಗಳಲ್ಲಿ ಒಟ್ಟಿಗೆ ಶೋ ಪ್ರಸಾರ ಆದ್ರೂ ಸುದೀಪ್ ಅವರು ಕನ್ನಡದಲ್ಲಿ ಶೋನ ನಿರೂಪಣೆ ಮಾಡಲಿದ್ದಾರೆ. ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಸ್ಟಾರ್ ನಟರು ನಡೆಸಿಕೊಡುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ವೆಂಕಟೇಶ್, ಮಲಯಾಳಂ ನಲ್ಲಿ ಪ್ರಥ್ವಿರಾಜ್ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಮುಗಿದ ನಂತರ ಈ ಶೋ ಶುರುವಾಗಲಿದೆ ಎನ್ನಲಾಗ್ತಿದ್ದು, ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಕಿಚ್ಚನನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

ದಾಖಲೆಗಳು ದಿಕ್ಕಾಪಾಲು.. `ಬಾಕ್ಸ್ ಆಫೀಸ್ ಸುಲ್ತಾನ’ ಅನ್ನೋದು ಇದಕ್ಕೆ..!

ಶಿವರಾತ್ರಿಯಂದು ಕಿಚ್ಚ ಸುದೀಪ್ ರನ್ನು ನೆನಪು ಮಾಡಿಕೊಂಡಿದ್ದೇಕೆ ರಾಗಿಣಿ..!

‘ಫೀಲ್ ದ ಪವರ್’ ನಲ್ಲಿ ಅಪ್ಪು ಪವರ್ ಸೂಪರ್..! ಮಸ್ತಾಗಿದೆ ಯುವರತ್ನ ಲಿರಿಕಲ್ ಸಾಂಗ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd