ಅಪ್ಪು ಗೆ ದಿನಕರ್ ತೂಗುದೀಪ್ ಆಕ್ಷನ್ ಕಟ್ ಹೇಳೋದು ಪಕ್ಕಾ..!
1 min read
ಅಪ್ಪು ಗೆ ದಿನಕರ್ ತೂಗುದೀಪ್ ಆಕ್ಷನ್ ಕಟ್ ಹೇಳೋದು ಪಕ್ಕಾ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ನಿರ್ದೇಶಕ ದಿನಕರ್ ತೂಗುದೀಪ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗೆ ಆಕ್ಷನ್ ಕಟ್ ಹೇಳಲಿರುವುದು ಪಕ್ಕಾ ಆಗಿದೆ. ಹೌದು ಈ ಮೂಲಕ ದಿನಕರ್ ಅವರು ಅಪ್ಪು ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳಿಗೆ ಬೆರೆ ಬಿದ್ದಿದೆ. ಇನ್ನೂ ಈ ಸಿನಿಮಾಗೆ ಜಯಣ್ಣ-ಭೋಗೇಂದ್ರ ಅವರು ಬಂಡವಾಳ ಹೂಡುತ್ತಿದ್ದಾರೆ.
ಸದ್ಯ ಏಪ್ರಿಲ್ ನಲ್ಲಿ ರಿಲೀಸ್ ಆಗಲಿರುವ ಯುವರತ್ನ ಪ್ರಚಾರದಲ್ಲಿ ಪುನೀತ್ ರಾಜ್ ಕಲುಮಾರ್ ಬ್ಯುಸಿಯಾಗಿದ್ದು, ಜೇಮ್ಸ್ ಸಿನಿಮಾದ ಶೂಟಿಂಗ್ ನಲ್ಲೂ ನಿರತರಾಗಿದ್ದಾರೆ. ಇದರ ಬೆನ್ನಲ್ಲೇ ಅವರ ಮತ್ತೊಂದು ಸಿನಿಮಾ ಅನೌನ್ಸ್ ಆಗಿದ್ದು, ಅಪ್ಪು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಬಿಗ್ ಬಾಸ್ ಗೆ ಗುಡ್ ಬೈ ಹೇಳ್ತಾರಾ ‘ಬಾದ್ ಷಾ’..?
ಇನ್ನೂ ಮೂಲಗಳ ಪ್ರಕಾರ ಜೇಮ್ಸ್ ಸಿನಿಮಾದ ಶೂಟಿಂಗ್ ಮುಕ್ತಾಯವಾದ ಬಳಿಕ ದಿನಕರ್ ಅವರ ಸಾರಥ್ಯದ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಆದ್ರೆ ಇದೆಲ್ಲದರ ನಡುವೆ ಪುನೀತ್ ರಾಜ್ ಕುಮಾರ್ ಜೊತೆಗೆ ಮತ್ತೊಂದ ಸಿನಿಮಾ ಅಂದ್ರೆ 3ನೇ ಬಾರಿಗೆ ಅಪ್ಪುಗೆ ಆಕ್ಷನ್ ಕಟ್ ಹೇಳಲು ಸಂತೋಶ್ ಆನಂದ್ ರಾಮ್ ಸಜ್ಜಾಗ್ತಿದ್ದಾರೆ. ಇತ್ತ ಪೈಲ್ವಾನ್ ಖ್ಯಾತಿಯ ನಿರ್ದೇಶಕ ಕೃಷ್ಣ ಸಹ ಪುನೀತ್ ಜೊತೆ ಸಿನಿಮಾ ಮಾಡಲು ಓಡಾಡುತ್ತಿದ್ದಾರೆ ಎನ್ನಲಾಗ್ತಿದೆ. ಹಾಗಾದ್ರೆ ಯಾವ ಸಿನಿಮಾದ ಶೂಟಿಂಗ್ ಮೊದಲು ಶುರುವಾಗುತ್ತೆ ಅನ್ನೋ ಪ್ರಶ್ನೆಗಳು ಸಹ ಎದ್ದಿವೆ.
ದಾಖಲೆಗಳು ದಿಕ್ಕಾಪಾಲು.. `ಬಾಕ್ಸ್ ಆಫೀಸ್ ಸುಲ್ತಾನ’ ಅನ್ನೋದು ಇದಕ್ಕೆ..!