Liger ನ್ಯೂಡ್ ಪೋಸ್ಟರ್ ಗೆ ಸ್ಯಾಮ್ ಬೋಲ್ಡ್ ಕಮೆಂಟ್
ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ರೌಡಿ ಹೀರೋ ವಿಜಯ್ ದೇವರಕೊಂಡ, ಬಾಲಿವುಡ್ ಬ್ಯೂಟಿ ಅನನ್ಯ ಪಾಂಡೆ ನಟಿಸಿರುವ ಪಾನ್ ಇಂಡಿಯಾ ಸಿನಿಮಾ ಲೈಗರ್.
ಆಗಸ್ಟ್ 25 ರಂದು ಈ ಸಿನಿಮಾ ಪ್ರಪಂಚದಾದ್ಯಂತ ರಿಲೀಸ್ ಆಗಲಿದೆ.
ಈ ಹಿನ್ನೆಲೆಯಲ್ಲಿ ಚಿತ್ರತಂಡ ಹೀರೋ ವಿಜಯ್ ದೇವರಕೊಂಡಗೆ ಸಂಬಂಧಿಸಿದ ಫೋಟೋವೊಂದನ್ನು ರಿಲೀಸ್ ಮಾಡಿದ್ದಾರೆ.
ಅದರಲ್ಲಿ ವಿಜಯ್ ನಗ್ನವಾಗಿ ಕಾಣಿಸಿಕೊಂಡಿದ್ದಾರೆ.
ದೇಹದ ಮೇಲೆ ಒಂದೇ ಒಂದು ನೂಲು ಇಲ್ಲದೇ ಪುಷ್ಪಗುಚ್ಛವನ್ನ ಅಡ್ಡವಾಗಿಟ್ಟುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ಈ ಫೋಟೋಗೆ ನಟಿ ಸಮಂತ ಬೋಲ್ಡ್ ಕಾಮೆಂಟ್ ಮಾಡಿದ್ದಾರೆ. ವಿಜಯ್ ಗೆ ನಿಯಮ ನಿಬಂಧನಗಳು ಚೆನ್ನಾಗಿ ಗೊತ್ತಿದೆ.
ಆದ್ದರಿಂದಲೇ ಅವುಗಳನ್ನ ಬ್ರೇಕ್ ಮಾಡಬಲ್ಲ ಕೂಡ. ಧೈರ್ಯ, ಕೀರ್ತಿ ವಿಜಯ ಸ್ವಂತ.
ಲೈಗರ್ ಪೋಸ್ಟರ್ ಸೂಪರ್ ಎಂದು ಇನ್ ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಸ್ಯಾಮ್ ಕಮೆಂಟ್ ಗೆ ವಿಜಯ್ ಪ್ರತಿಕ್ರಿಯೆ ನೀಡಿದ್ದು, ಸ್ಯಾಮ್ ನೀನು ಬೆಸ್ಟ್ ಎಂದು ಬರೆದುಕೊಂಡಿದ್ದಾರೆ.
ಸಮಂತ ಜೊತೆಗೆ ತಮನ್ನಾ, ಅನುಷ್ಕಾ, ಜಾನ್ವಿ ಕಪೂರ್, ರಾಶಿಖನ್ನಾ ಕೂಡ ಈ ಪೋಸ್ಟರ್ ಬಗ್ಗೆ ಸ್ಪಂದಿಸಿದ್ದಾರೆ.
ಇನ್ನು ಲೈಗರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಪೂರಿ ಜಗನ್ನಾಥ್ ನಿರ್ದೇಶನದ ಈ ಮೂವಿ ಆಗಸ್ಟ್ 25ಕ್ಕೆ ರಿಲೀಸ್ ಆಗಲಿದೆ.