ಅನಾರೋಗ್ಯದಿಂದ ಬಳಲುತ್ತಿದ್ದಾರೆ ನಟಿ ಸಮಂತಾ – ಸಮಂತಾ ಗೆ “ಮಯೋಸಿಟಿಸ್”
ಟಾಲಿವುಡ್ ಬಹು ಬೇಡಿಕೆಯ ನಟಿ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದರ ನಡುಯೂ ತಮ್ಮ ಮುಂದಿನ ಚಿತ್ರಕ್ಕೆ ಡಬ್ಬಿಂಗ್ ಮಾಡಿ ಕೆಲಸದ ಮೇಲಿನ ಬದ್ದತೆಯನ್ನ ತೋರಿಸಿಕೊಟ್ಟಿದ್ದಾರೆ.
ನಟಿ ಸಮಂತ ಅಭಿನಯದ ಯಶೋಧ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಕೆಲವೇ ದಿನಗಳಲ್ಲಿ ಚಿತ್ರ ಮಂದಿರ ಗಳಲ್ಲಿ ಬಿಡುಗಡೆಯಾಗಲಿದೆ. ಇದಕ್ಕಾಗಿ ಡಬ್ಬಿಂಗ್ ಮಾಡುತ್ತಿರುವ ಸಮಂತಾ ಪೋಟೋ ಸಮೇತ ಪತ್ರ ಬರೆದಿದ್ದಾರೆ. ಆದರೆ ಸಮಂತಾ ಕೈಯಲ್ಲಿ ಸಲೈನ್ ಇರುವುದನನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ನಟಿ ಸಮಂತ ಮಯೋಸಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಮಾಂಸಖಂಡಗಳ ದೌರ್ಬಲ್ಯ, ನೋವು, ಮತ್ತು ಉರಿಯೂತದಿಂದ ಬಳಲುತ್ತಿರುತ್ತಾರೆ.
ನಟಿ ಸಮಂತ ಬರೆದುಕೊಂಡಿರುವ ಪತ್ರ ಈ ರೀತಿ ಇದೆ.
“’ಯಶೋದಾ’ ಚಿತ್ರದ ಟ್ರೈಲರ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬದುಕು ನನ್ನ ಮುಂದೆ ಕೊನೆಯಿಲ್ಲದ ಸವಾಲುಗಳನ್ನು ಇಟ್ಟಿದೆ. ಅಭಿಮಾನಿಗಳು ತೋರಿದ ಪ್ರೀತಿ ಮತ್ತು ವಾತ್ಸಲ್ಯವು ಆ ಸವಾಲುಗಳನ್ನು ಎದುರಿಸಲು ನನಗೆ ಹೆಚ್ಚಿನ ಧೈರ್ಯ ಮತ್ತು ಧೈರ್ಯವನ್ನು ನೀಡುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ‘ಮಯೋಸಿಟಿಸ್’ ಎಂಬ ಆಟೋಇಮ್ಯೂನ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ವಿಷಯವನ್ನು ಯಾವಾಗಲಾದರೂ ತಿಳಿಸಲು ಬಯಸುತ್ತೇನೆ. ಸ್ವಲ್ಪ ತಡವಾಯಿತು. ಈಗ ನನ್ನ ಆರೋಗ್ಯ ಸ್ಥಿರವಾಗಿದೆ. ಶೀಘ್ರದಲ್ಲೇ ಈ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾನಸಿಕವಾಗಿ ಮತ್ತು ದೈಹಿಕವಾಗಿ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ಕಂಡಿದ್ದೇನೆ. ನಾನು ಇನ್ನೊಂದು ದಿನ ಹೀಗೆ ಇರಲಾರೆ. ಕ್ಷಣಗಳು ಕಳೆಯುತ್ತಿವೆ. ನನ್ನ ಸಂಪೂರ್ಣ ಚೇತರಿಸಿಕೊಳ್ಳುವ ದಿನ ಬಹಳ ಹತ್ತಿರದಲ್ಲಿದೆ. ನಾನು ನಿಮ್ಮನ್ನ ಪ್ರೀತಿಸುತ್ತೇನೆ” ಎಂದು ಸಮಂತಾ ಟ್ವೀಟ್ ಮಾಡಿದ್ದಾರೆ.
ಸದ್ಯ ಸಮಂತಾ ಅಭಿನಯದ ‘ಯಶೋದಾ’ ಮತ್ತು ‘ಶಾಕುಂತಲಂ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ‘ಖುಷಿ’ ಸಿನಿಮಾ ಶೂಟಿಂಗ್ ಹಂತದಲ್ಲಿದೆ.
Samantha Ruth Prabhu breaks silence on her health, reveals she has been diagnosed with autoimmune condition Myositis