ಅತ್ಯಂತ ಜನಪ್ರಿಯ ಮಹಿಳಾ ತಾರೆ ಸಮಂತ ರುತು ಫ್ರಭು
ಸೌತ್ ಸಿನಿ ದುನಿಯಾದ ಸೂಪರ್ ಸ್ಟಾರ್ ನಟಿ ಸಮಂತಾ ರುತು ಪ್ರಭು ಅತ್ಯಂತ ಜನಪ್ರಿಯ ಮಹಿಳಾ ತಾರೆ ಎಂಬ ಬಿರುದಿಗೆ ಭಾಜನರಾಗಿದ್ದಾರೆ.
ಓರ್ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ ಇತ್ತೀಚೆಗೆ ಅತ್ಯಂತ ಜನಪ್ರಿಯ ಮಹಿಳಾ ತಾರೆಯರ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, 10 ನಟಿಯರ ಪಟ್ಟಿ ಬಿಡುಗಡೆ ಮಾಡಿದ್ದು, ಆಲಿಯ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನ ಹಿಂದಿಕ್ಕಿ ಸಮಂತಾ ಅಗ್ರಸ್ಥಾನದಲ್ಲಿದ್ದಾರೆ.
ಓರ್ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಪಟ್ಟಿಯಲ್ಲಿರುವ ಪ್ರಕಾರ ಆಲಿಯಾ ಭಟ್ ಎರಡನೇ ಸ್ಥಾನ, ನಯನತಾರಾ ಮೂರನೇ ಸ್ಥಾನ, ಕಾಜಲ್ ಅಗರ್ವಾಲ್ ನಾಲ್ಕನೇ ಸ್ಥಾನದಲ್ಲಿ, ದೀಪಿಕಾ ಪಡುಕೋಣೆ ಐದನೇ ಸ್ಥಾನದಲ್ಲಿ, ರಶ್ಮಿಕಾ ಮಂದಣ್ಣ ಆರನೇ ಸ್ಥಾನದಲ್ಲಿ, ಕತ್ರಿನಾ ಕೈಫ್ ಏಳನೇ ಸ್ಥಾನದಲ್ಲಿ, ಅನುಷ್ಕಾ ಶೆಟ್ಟಿ ಎಂಟನೇ ಸ್ಥಾನದಲ್ಲಿ, ಕೃತಿ ಸುರೇಶ್ ಒಂಬತ್ತನೇ ಸ್ಥಾನದಲ್ಲಿ ಮತ್ತು ತ್ರಿಶಾ ಕೃಷ್ಣನ್ ಹತ್ತನೇ ಸ್ಥಾನದಲ್ಲಿದ್ದಾರೆ.3
ಸಮಂತಾ ಕೊನೆಯದಾಗಿ ನಟಿಸಿದ್ದ ‘ಯಶೋದಾ’ ಚಿತ್ರ ಬಿಡುಗಡೆಯಾಗಿದ್ದು ನಟಿಯ ಅಭಿನಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೂ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಕಮಾಲ್ ಮಾಡುವಲ್ಲಿ ಸೋತಿದೆ.
ಸಮಂತ ಕೆಲ ದಿನಗಳ ಹಿಂದೆ ತಮ್ಮ ಅನಾರೋಗ್ಯದ ಬಗ್ಗೆ ಬಹಿರಂಗಪಡಿಸಿದ್ದು, ಮಯೋಸಿಟಿಸ್ ಎಂಬ ಕಾಯಿಲೆ ವಿರುದ್ಧ ಹೋರಾಡುತ್ತಿದ್ದಾರೆ. ಇತ್ತೀಚೆಗೆ ಚೇತರಿಸಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.
Samantha Ruth Prabhu: Most Popular Female Star ‘Samantha Ruth Prabhu’