ಸಮಂತಾ ವಿರುದ್ಧ ಸಮರ ಸಾರಿದ ನಾಗಚೈತನ್ಯ ಫ್ಯಾನ್ಸ್ : ಕಾರಣವೇನು..?
ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಸಮಂತಾ ನಾಗಚೈತನ್ಯ ಸದ್ಯ 10 ವರ್ಷಗಳ ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ದೂರ ದೂರ ಎರೆಡು ತೀರ ಅನ್ನೋಹಾಗೆ ಇದ್ದಾರೆ.. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್ ಪಡೆದು ಸದ್ಯ ಇಬ್ರೂ ಕೂಡ ವೃತ್ತಿ ಜೀವನದಲ್ಲಿ ಬ್ಯುಸಿಯಿದ್ದಾರೆ.. ಸಮಂತಾ ಹಾಗೂ ನಾಗಚೈತನ್ಯ ಇಬ್ರೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಸಿಯಾಗಿದ್ದಾರೆ..
ಆದ್ರೆ ಡಿವೋರ್ಸ್ ಬಳಿಕ ಇವರ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ರು.. ಜೊತೆಗೆ ಇಬ್ಬರೂ ಕೂಡ ನೆಟ್ಟಿಗರಿಂದ ತೀವ್ರ ಟ್ರೋಲ್ ಗಳು ಟೀಕೆಗಳಿಗೂ ಗುರಿಯಾಗಬೇಕಾಯ್ತು.. ಆದ್ರೂ ಇಬ್ರೂ ಕೂಡ ಸೈಲೆಂಟಾಗಿಯೇ ಇದ್ರು.. ಆದ್ರೆ ಇತ್ತೀಚೆಗೆ ಸಮಂತಾ ಡಿವೋರ್ಸ್ ನಂತರ ಮನಸ್ಸು ಬಿಚ್ಚಿ ಮಾತನಾಡಿದ್ದರು.. ಅವರ ಹೇಳಿಕೆಯಿಂದ ಅವರು ನಾಗಚೈತನ್ಯ ಅವರನ್ನ ಗುರಿಯಾಗಿಸಿಕೊಂಡು ಮಾತನಾಡಿರುವಂತೆ ಅನ್ನಿಸಿತ್ತು..
ಸಮಂತಾ “ ಜಾಗರೂಕತೆಯಿಂದ ಬಹಳ ಎಚ್ಚರ ವಹಿಸಿ ರೂಪಿಸಿದ್ದ ಯೋಜನೆಗಳೆಲ್ಲವೂ ನಾಶವಾಗಿದೆ.. ವಿಚ್ಛೇದನ ಅನ್ನುವುದೇ ಒಂದು ನೋವಿನ ಪ್ರಕ್ರಿಯೆ. ಒಂಟಿತನವೇ ಈ ನೋವಿನಿಂದ ಹೊರಬರಲು ಸಹಾಯ ಮಾಡುತ್ತದೆ. ವೈಯಕ್ತಿಕವಾಗಿ ಮಾಡುತ್ತಿರುವ ದಾಳಿ ನಿರಂತರವಾಗಿ ನಡೆಯುತ್ತಿದೆ. ಆದರೆ ಇದೆಲ್ಲವೂ ನನ್ನನ್ನು ಕುಗ್ಗಿಸಲು ಬಿಡುವುದಿಲ್ಲ ಎಂದು ನಾನು ಪ್ರಾಮೀಸ್ ಮಾಡ್ತೇನೆ” ಎಂದಿದ್ದರು.
ಭಾರತದಲ್ಲಿ ಹೊಸ ದಾಖಲೆ ಬರೆದ ’Spider-Man’
ಆದ್ರೆ ನಾಗಿಚೈತನ್ಯ ಮಾತ್ರ ಸಮಂತಾರ ಈ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಜಾರಿದ್ದರು.. ಆದ್ರೆ ಈಗ ನಾಗಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಮುಗಿಬಿದ್ದಿದ್ದಾರೆ.. ನಾಗಚೈತನ್ಯ ಅವರ ಹಳೆಯ ಹೇಳಿಕೆಯ ವಿಡಿಯೋವೊಂದನ್ನ ಶೇರ್ ಮಾಡಿ ವೈರಲ್ ಮಾಡಿದ್ದಾರೆ..
ನಾಗಚೈತನ್ಯರ ಈ ಹೇಳಿಕೆಯಲ್ಲಿ “ ನಾನು ಎಲ್ಲಾ ವಿಧವಾದ ಪಾತ್ರಗಳನ್ನ ಮಾಡಲು ಬಂದಿದ್ದೇನೆ.. ಆದ್ರೆ ಪಾತ್ರಗಳು ನಮ್ಮ ಕುಟುಂಬ ಹಾಗೂ ನಮ್ಮ ಗೌರವಕ್ಕೆ ಧಕ್ಕೆ ತರಬಾರದು.. ನನ್ನ ಕುಟುಂಬವನ್ನು ಮುಜುಗರಕ್ಕೆ ಈಡು ಮಾಡುವ ಪಾತ್ರವನ್ನ ನಾನು ಮಾಡೋದಿಲ್ಲ” ಎಂದಿದ್ದಾರೆ.. ಇದು ನಾಗಚೈತನ್ಯ ಅವರ ಹಳೆಯ ಸಂದರ್ಶನದ ವಿಡಿಯೋವಾಗಿದೆ..
ಇದೇ ವಿಡಿಯೋ ವೈರಲ್ ಮಾಡ್ತಾ ಸಮಂತಾ ವಿರುದ್ಧ ಸಮರ ಸಾರಿದ್ದಾರೆ ನಾಗ ಚೈತನ್ಯ ಫ್ಯಾನ್ಸ್..
ಮೂಲಗಳ ಪ್ರಕಾರ , ವದಂತಿಗಳನ್ನ ನೋಡಿದ್ರೆ , ಸಮಂತಾ ‘ ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.. ಇದೇ ಇವರ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಕಾರಣ ಎನ್ನಲಾಗಿದೆ.. ಇಲ್ಲಿಂದಲೇ ಇವರ ಸಂಬಂಧ ಹಾಳಾಗತೊಡಗಿತು ಎನ್ನಲಾಗಿದೆ..