ನಟ ನಾಗ ಚೈತನ್ಯ ಜೊತೆ ಡಿವೋರ್ಸ್ ಪಡೆದುಕೊಂಡ ಬಳಿಕ ನಟಿ ಸಮಂತಾ ಟ್ರೋಲ್ ಆಗಿದ್ದೇ ಹೆಚ್ಚು.
ಸೋಶಿಯಲ್ ಮೀಡಿಯಾದಲ್ಲಿ ಸ್ಯಾಮ್ ಯಾವುದೇ ಪೋಸ್ಟ್ ಹಾಕಿದ್ರೂ ಟ್ರೋಲ್ ಆಗುತ್ತಲೇ ಇದ್ದಾರೆ.
ಟೀಕೆಗಳನ್ನು ಎದುರಿಸುತ್ತಲೇ ಇದ್ದಾರೆ. ಇದು ಸ್ಯಾಮ್ ಗೂ ಕೂಡ ಸಾಮಾನ್ಯ ಎಂಬಂತಾಗಿದೆ.
ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಬಾಲಿವುಡ್ , ಹಾಲಿವುಡ್ ನಲ್ಲೂ ಸಿನಿಮಾ ಮಾಡ್ತಾ ಇದ್ಧಾರೆ.. ಕೋಟಿ ಕೋಟಿ ಸಂಭಾವನೆ ಪಡೆಯುವ ಸಮಂತಾ ಅರತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಸೌತ್ ನಟಿಯರ ಪೈಕಿ ಒಬ್ರು..
ಇದೆಲ್ಲದರ ನಡುವೆ ಕೆಲ ಟಾಕ್ ಶೋಗಳಲ್ಲೂ ಸಮಂತಾ ಭಾಗಿಯಾಗ್ತಿದ್ದಾರೆ.. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಸ್ಯಾಮ್ ಭಾಗವಹಿಸಿದ್ದರು..
2 ವರ್ಷಗಳ ನಂತರ, ಕರಣ್ ಜೋಹರ್ ಕಾಫಿ ವಿತ್ ಕರಣ್ ಶೋ ನ ಮುಂದಿನ ಸೀಸನ್ ನಡೆಸಿಕೊಡ್ತಿದ್ದು , ಇದು ಒಟಿಟಿಯಲ್ಲಿ ಪ್ರಸಾರವಾಗ್ತಿದೆ.. 3 ನೇ ಸಂಚಿಕೆಯಲ್ಲಿ, ಸಮಂತಾ ರುತ್ ಪ್ರಭು ಮತ್ತು ಅಕ್ಷಯ್ ಕುಮಾರ್ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ಅಂದ್ಹಾಗೆ ಇತ್ತೀಚೆಗೆ ಜನಪ್ರಿಯ ಮೀಡಿಯಾ ಏಜೆನ್ಸಿ ಓರ್ಮ್ಯಾಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಜೂನ್ ತಿಂಗಳ ಬಹು ಜನಪ್ರಿಯ ನಟಿಯರ ಪಟ್ಟಿಯಲ್ಲಿ ಸಮಂತಾ ಮೊದಲ ಸ್ಥಾನ ಪಡೆದುಕೊಂಡಿದ್ದರು.
ಇನ್ನು ಆ ಪಟ್ಟಿಯಲ್ಲಿ ಆಲಿಯಾ ಭಟ್ ಗೆ ಎರಡನೇ ಸ್ಥಾನ, ನಯನತಾರಾಗೆ ಮೂರನೇ ಸ್ಥಾನ, ದೀಪಿಕಾ ಪಡುಕೋಣೆಗೆ ನಾಲ್ಕನೇ ಸ್ಥಾನ ಸಿಕ್ಕಿತ್ತು.
ಈ ಬಗ್ಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಮಂತಾ ಮಾತನಾಡಿದ್ದಾರೆ.. ಆಗ ಒರ್ಮಾಕ್ಸ್ ಸಮೀಕ್ಷೆಯಲ್ಲಿ ನಂಬರ್ ವನ್ ಸ್ಥಾನವನ್ನು ನೀವು ಹೇಗೆ ಧಕ್ಕಿಸಿಕೊಂಡಿದ್ದು ಹೇಗೆ ಅನ್ನುವ ಕರಣ್ ಪ್ರಶ್ನೆಗೆ ಉತ್ತರಿಸಿರುವ ಸ್ಯಾಮ್ ಆ ಸಂಸ್ಥೆಗೆ ಲಂಚ ಕೊಟ್ಟಿದ್ದೆ ಎಂದಿದ್ದಾರೆ.. ಸಮಂತಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬೇರೆ ನಟಿಯರ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಆದ್ರೆ ಸಮಂತಾ ಉತ್ತರಿಸಿದ್ದು ತಮಾಷೆಯಾಗಿಯಷ್ಟೇ… ಹೀಗಾಗಿ ಟ್ರೋಲರ್ಸ್ ಗೆ ಸಮಂತಾ ಫ್ಯಾನ್ಸ್ ಸಹ ತಿರುಗೇಟು ನೀಡ್ತಿದ್ದಾರೆ..








