ಡಿವೋರ್ಸ್ ನಂತರ ಆದ್ಯಾತ್ಮಕತೆ ಕಡೆಗೆ ಸಮಂತಾ – ರಿಷಿಕೇಷ ಭೇಟಿ ನಂತರ ಚಾರ್ ಧಾಮ್ ಯಾತ್ರೆಯಲ್ಲಿ ಭಾಗಿ..!
ಹೈದರಾಬಾದ್ : ಟಾಲಿವುಡ್ ನ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ತಿದ್ದ ಸಮಂತಾ ಹಾಗೂ ನಾಗಚೈತನ್ಯ ಇಬ್ರು 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದು, ಡಿವೋರ್ಸ್ ಪಡೆದು ಕೆಲ ದಿನಗಳ ಕಳೆದಿವೆ. ವಿಚ್ಛೇಧನದ ನಂತರ ಸಮಂತಾ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ರು. ಸಾಕಷ್ಟು ನಿಂದನೆಗೂ ಒಳಗಾಗಿದ್ದರು. ಇದೆಲ್ಲದರ ನಡುವೆ ಇದೀಗ ಸಮಂತಾ ಚಾರ್ ಧಾಮ್ ಯಾತ್ರೆ ಮಾಡಿದ್ದಾರೆ. ಈ ಸಂಬಂಧಿತ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರೋ ನಟಿ ಯಶಸ್ವಿಯಾಗಿ ಚಾರ್ ಧಾಮ್ ಯಾತ್ರೆ ಪೂರ್ಣಗೊಳಿಸಿದ್ದೇನೆ. ಹಿಮಾಲಯ ಎಂದರೆ ತುಂಬಾ ಇಷ್ಟ. ಮಹಾಭಾರತ ಓದಿದಾಗಿನಿಂದ ಭೂಮಿಯ ಮೇಲಿನ ಈ ಸ್ವರ್ಗಕ್ಕೆ ಭೇಟಿ ಕೊಡಬೇಕೆಂದು ಅಂದುಕೊಂಡಿದ್ದೆ. ಹಿಮಾಲಯಕ್ಕೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಈ ಯಾತ್ರೆಯ ಅನುಭವ ನಿಜಕ್ಕೂ ವಿಶೇಷ ಎಂದು ಬರೆದುಕೊಂಡಿದ್ದಾರೆ.
ಸ್ನೇಹಿತೆ ಶಿಲ್ಪಾ ರೆಡ್ಡಿ ಜೊತೆ ಸಮಂತಾ ಅವರು ಚಾರ್ ಧಾಮ್ ಯಾತ್ರೆಯನ್ನು ಮಾಡಿದ್ದಾರೆ. ಯಾತ್ರೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಇದಕ್ಕೂ ಕೆಲ ಸಮಯದ ಮೊದಲು ಸಮಂತಾ ರಿಷಿಕೇಷಕ್ಕೂ ತೆರಳಿದ್ರು. ಅಲ್ಲಿನ ದೇವಾಯಲಗಳು ಮಠಗಳಿಗೆ ಭೇಟಿ ಕೊಟ್ಟಿದ್ದರು. ಜೊತೆಗೆ ಗಂಗೆಯ ತೀರದಲ್ಲಿ ನಡೆಯುವ ಪೊಜೆ ಹಾಗೂ ಹೋಮದಲ್ಲಿಯೂ ಭಾಗಿಯಾಗಿದ್ದರು.
ಡಾಲಿ ರತ್ನನ್ ಪ್ರಪಂಚಕ್ಕೆ ನಾಯಕಿಯಾಗುವ ಆಫರ್ ಕೈಬಿಟ್ಟ ರಮ್ಯಾ..!
ಅಮಿತ್ ಶಾ ಗೆ ವಿಶ್ ಮಾಡಿದ ಸಾರಾ – NCB ದಾಳಿ ಆಗಲ್ಲ ಎಂದ ನೆಟ್ಟಿಗರು..!
OMG 2 ಪೋಸ್ಟರ್ ನಲ್ಲಿ ಶಿವನ ಪಾತ್ರದಲ್ಲಿ ಅಕ್ಷಯ್ : ಫಸ್ಟ್ ಲುಕ್ ವೈರಲ್..!