Sampath Raj

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಸಂಪತ್ ರಾಜ್ ಮೇಲೆ ಕ್ರಮ ಕೈಗೊಳ್ಳುವಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸುತ್ತಿದ್ದಾರೆ. ಅಲ್ಲದೇ ಸಂಪತ್ ರಾಜ್ ವಿರುದ್ಧ ಆಕ್ರೋಶ ಬುಗಿಲೆದ್ದಿರುವಾಗಲೇ ಡಿಕೆಶಿ ಅವರ ನಡೆ ಕುತೂಹಲ ಮೂಡಿಸುವ ಜೊತೆಗೆ ಸಾಕಷ್ಟು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

“ನನ್ನ ಮನೆಗೆ ಬೆಂಕಿ ಹಾಕಿಸಿದ ಸಂಪತ್ ರಾಜ್ರನ್ನ ಕಾಂಗ್ರೆಸ್ ಪಕ್ಷದಿಂದಲೇ ಉಚ್ಛಾಟಿಸಿ” ಅಂತ ಅಖಂಡ ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ. ಆದರೆ ಪೊಲೀಸರ ಚಾರ್ಜ್ ಶೀಟ್ನಲ್ಲಿ ಆರೋಪಿಯಾಗಿರೋ ಸಂಪತ್ ರಾಜ್‍ನನ್ನು ಪಕ್ಷದಿಂದ ಉಚ್ಛಾಟನೆ ಮಾಡೋ ಬದಲು ಚುನಾವಣೆ ಜವಾಬ್ದಾರಿ ಹೊರಿಸಿದ್ದಾರೆ. ಆರ್.ಆರ್. ನಗರದ ಚುನಾವಣೆಯ ವೀಕ್ಷಕರ ಪಟ್ಟಿಯಲ್ಲಿ ಸಂಪತ್ ರಾಜ್ಗೆ ಸ್ಥಾನ ನೀಡಲಾಗಿದೆ.
ಪ್ರವಾಹದಿಂದ ಮನೆ, ಬೆಳೆ ಹಾನಿ ಪರಿಹಾರ ಸಂಬಂಧ ಪ್ರಧಾನಿ ಜತೆ ಚರ್ಚೆ: ಸಿಎಂ ಬಿಎಸ್‍ವೈ
ಅಖಂಡ ಶ್ರೀನಿವಾಸಮೂರ್ತಿ ಜೊತೆಯಲ್ಲೇ ಮಾಜಿ ಮೇಯರ್ ಸಂಪತ್ ರಾಜ್ಗೂ ಜವಾಬ್ದಾರಿ ವಹಿಸಲಾಗಿದೆ. ಸಂಪತ್ ರಾಜ್ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಂಡು, ಸದ್ಯ ಆಸ್ಪತ್ರೆಯಲ್ಲಿ ಲ್ಲಿದ್ದಾರೆ. ಹೀಗಿದ್ದರೂ ಸಂಪತ್ ರಾಜ್ ಗೆ ಚುನಾವಣಾ ಜವಾಬ್ದರಿ ನೀಡಿದ್ದೇಕೆ. ಅಮಾನತು ಅಥವಾ ಉಚ್ಛಾಟನೆ ಶಿಕ್ಷೆ ಬದಲು ಚುನಾವಣಾ ಜವಾಬ್ದಾರಿ ನೀಡಿದ್ದೇಕೆ ಎಂಬ ಪ್ರಶ್ನೆಗಳು ಎದುರಾಗಿವೆ.
Sampath Raj
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel