Samsung Galaxy A33 5G | ಸ್ಯಾಮ್ಸಂಗ್ ಸ್ಮಾರ್ಟ್ಫೋನಿನ ಬೆಲೆ ಕಡಿತ
ನಾಲ್ಕು ತಿಂಗಳ ನಂತರ ಬೆಲೆ ಕಡಿತ
ಮಾರ್ಚ್ ನಲ್ಲಿ ಬಿಡುಗಡೆಗೊಂಡಿದ್ದ ಫೋನ್
2 ರೂಪಾಂತರಗಳಲ್ಲಿ ರೂಪಾಯಿ 3000 ಕಡಿಮೆ
8GB RAM, 5,000mAh ಬ್ಯಾಟರಿ ಹಲವು ಫೀಚರ್ಸ್
ಸ್ಯಾಮ್ಸಂಗ್ ಈ ವರ್ಷ ಮಾರ್ಷ್ ನಲ್ಲಿ ರಿಲೀಸ್ ಮಾಡಿದ Samsung Galaxy A33 5G ಸ್ಮಾರ್ಟ್ ಫೋನ್ ದರವನ್ನು 3000 ರುಪಾಯಿ ಕಡಿಮೆ ಮಾಡಿದೆ.
Samsung Galaxy A33 5G ಫೋನ್ ಈ ವರ್ಷ ಮಾರ್ಚ್ ನಲ್ಲಿ ರಿಲೀಸ್ ಆದಾಗ ಇದ್ದ ಬೆಲೆಗೂ ಈಗಿನ ಬೆಲೆ 3000 ರೂಪಾಯಿ ಕಡಿಮೆ ಆಗಿದೆ.
ಆರಂಭದಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಸಮಯದಲ್ಲಿ 6GB RAM + 128GB ಸ್ಟೋರೇಜ್ ರೂಪಾಂತರಕ್ಕೆ 28,499 ರೂಪಾಯಿ ಇತ್ತು.

ಆದ್ರೆ ಈಗ 25,499 ರೂಪಾಯಿ ಆಗಿದೆ. 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 29,999 ರೂಪಾಯಿ ಇತ್ತು. ಈಗ 26,999 ರೂಪಾಯಿ ಆಗಿದೆ.
ಇನ್ನು Samsung Galaxy A33 5G 90Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. Exynos 1280 ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸುತ್ತದೆ.