ಬೆಂಗಳೂರು : ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿಯರಿಬ್ಬರೂ ಡ್ರಗ್ಸ್ ಸೇವನೆ ಮಾಡಿರೋದು ಎಫ್ ಎಸ್ ಎಲ್ ವರದಿಯಲ್ಲಿ ದೃಢವಾಗಿದೆ ಎಂದು ತಿಳಿದುಬಂದಿದೆ.
ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿರೋದಾಗಿ ಹೈದರಾಬಾದ್ ನ ಸಿಎಸ್ ಎಫ್ಎಲ್ನ ಲ್ಯಾಬ್ ವರದಿ ನೀಡಿದ್ದು, ಇದನ್ನು ಸಿಸಿಬಿ ತರಿಸಿಕೊಂಡಿದೆ.
ಆದ್ರೆ ಇದರ ಬೆನ್ನಲ್ಲೇ ಸಂಜನಾಗೆ ಧಿಡೀರ್ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೂ ಅಡ್ಮಿಟ್ ಆಗಿಬಿಟ್ಟಿದ್ದಾರೆ.. ಹೌದು ವರದಿ ಬಂದ ಬೆನ್ನಲ್ಲೇ ಈ ಬಗ್ಗೆ ನನಗೇನೂ ಗೊತ್ತೇ ಇಲ್ಲ ಅಂದಿದ್ರು ಸಂಜನಾ, ಮತ್ತೊಂದೆಡೆ ಆಕೆ ತಾಯಿ ಗಳ ಗಳ ಕಣ್ಣೀರಿಟ್ಟಿದ್ರು.. ಇದೀಗ ಸಂಜನಾ ಆಸ್ಪತ್ರೆ ಸೇರಿದ್ದು ಸಾಕಷ್ಟು ಅನುಮಾನಗಳನ್ನೂ ಕೂಡ ಹುಟ್ಟುಹಾಕಿದೆ.
ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಇದೀಗ ಈ ವರದಿ ಬಂದಿದ್ದು, ಇಬ್ಬರೂ ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಸಂಜನಾ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಈ ಹಿಂದೆ ಸಂಜನಾಗೆ ಸರ್ಜರಿ ಆಗಿತ್ತು. ಹೀಗಾಗಿ ರಾತ್ರಿಯೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಮೆಂಟಲಿ ಅಪ್ ಸೆಟ್ ಆಗಿದ್ದಾರೆ ಎಂದು ನಟಿ ಸಂಜನಾ ತಾಯಿ ರೇಷ್ಮಾ
ಅಮೆರಿಕಾದಲ್ಲಿ ಭಾರತೀಯನಿಗೆ 2ವರ್ಷ ಜೈಲು – ಕೋವಿಡ್ ನಿಧಿಗೆ 13 ಕೋಟಿ ರೂ. ವಂಚನೆ ಆರೋಪ
ಪ್ರತಿಕ್ರಿಯಿಸಿದ್ದಾರೆ. ಸದ್ಯ ಆಕೆ ಈ ಕೇಸ್ ನಿಂದ ಡಿಸ್ಟರ್ಬ್ ಆಗಿದ್ದಾಳೆ. ಪದೇ ಪದೇ ಇದೇ ಕೇಸ್ ಬಗ್ಗೆ ಕೇಳಿ ಡಿಪ್ರೆಶನ್ ಗೆ ಹೋಗಿದ್ದಾಳೆ. ಹುಷಾರಿಲ್ಲದ ಕಾರಣ ಆಕೆಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ನನ್ನ ಮಗಳು ಏನೂ ತಪ್ಪು ಮಾಡಿಲ್ಲ. ಆದರೆ ದುರಾದೃಷ್ಟದಿಂದ ಈತರ ಎಲ್ಲಾ ಆಗ್ತಿದೆ. ನಾವು ಭಗವಾನ್ ನನ್ನ ನಂಬ್ತೀವಿ. ದೇವರ ದಯೆಯಿಂದ ನಾಲ್ಕು ಜನರಿಗೆ ಸಹಾಯ ಮಾಡುತ್ತಿದ್ದೇವೆ. ಹುಷಾರಿಲ್ಲದ ಕಾರಣ ನಂಗೆ ಊಟ ನೀಡೋಕೆ ಹೇಳಿದಳು ಎಂದರು.
ಸಂಜನಾಗೆ ಹುಷಾರಿಲ್ಲ ಬೇಜಾರನಲ್ಲಿ ಇದ್ದೇವೆ. ಅವರಿಗೆ ಅಟ್ಯಾಕ್ಟ್ ತರಾ ಆಗ್ತಿದೆ. 10-12 ದಿನ ಊಟ ಕೊಡ್ತೇವೆ. ತುಂಬಾ ಡಿಪ್ರೇಸ್ ಆಗಿದ್ದಾರೆ. ಎಲ್ಲರೂ ಸರ್ಪೋಟ್ ಮಾಡಿ. ತಾಯಿಯಾಗಿ ದೇವರನ್ನು ಪ್ರೇಯರ್ ಮಾಡ್ತೇನೆ ಎಂದು ರೇಷ್ಮಾ ಹೇಳಿಕೊಂಡಿದ್ದಾರೆ.
ಮತ್ತೆ ಮದುವೆಯಾದ ಬಹುಭಾಷಾ ನಟ ಪ್ರಕಾಶ್ ರಾಜ್..!
10 ತಿಂಗಳ ಬಳಿಕ ಹೈದರಾಬಾದ್ ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಿಕ್ಕಿದ್ದು, ತಲೆಕೂದಲ ಪರೀಕ್ಷೆಯಲ್ಲಿ ನಟಿಯರ ಮಾದಕ ದ್ರವ್ಯ ಸೇವನೆ ದೃಢವಾಗಿದೆ. 2020ರ ಸೆಪ್ಟೆಂಬರ್ 13 ಕೆಸಿ ಜನರಲ್ ಆಸ್ಪತ್ರೆಯಲ್ಲಿ ರಕ್ತ, ಯೂರಿನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಮತ್ತೆ ಡಿಸೆಂಬರ್ 5ರಂದು ಕೋರ್ಟ್ ಅನುಮತಿ ಪಡೆದು, ಕೂದಲು, ರಕ್ತ, ಯೂರಿನ್ ಅಂಶಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಎಫ್ಎಸ್ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ತಲೆ ಕೂದಲ ಮೂಲಕ ಡ್ರಗ್ಸ್ ಸೇವನೆ ಖಚಿತ ಆಗಿರೋದು ಇದೇ ಮೊದಲ ಕೇಸ್ ಎಂದು ಸಿಸಿಬಿ ಹೇಳಿದೆ.