ಮತ್ತೆ ಮದುವೆಯಾದ ಬಹುಭಾಷಾ ನಟ ಪ್ರಕಾಶ್ ರಾಜ್..!
ಕನ್ನಡದ, ತೆಲುಗು , ತಮಿಳು , ಹಿಂದಿ ಹೀಗೆ ಬಹುತೇಕ ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿರುವ ನಟ ಪ್ರಕಾಶ್ ರಾಜ್ ಅವರು ಇದೀಗ ಮತ್ತೊಮ್ಮೆ ಮದುವೆಯಾಗಿದ್ದಾರೆ. ಹೌದು ಆದ್ರೆ ಮತ್ತೊಬ್ಬರ ಜೊತೆಗಲ್ಲ.. ಮತ್ತೆ ತಮ್ಮ ಪತ್ನಿಯ ಜೊತೆಗೆ ಎರಡನೇ ಬಾರಿಗೆ ಮದುವೆಯಾಗಿದ್ದಾರೆ.. ಅಂದ್ಹಾಗೆ ಇತ್ತೀಚಿಗಷ್ಟೆ ಪ್ರಕಾಶ್ ರಾಜ್ ಅವರು 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ನಟ ಪ್ರಕಾಶ್ ರಾಜ್ ಮತ್ತು ಪತ್ನಿ ಪೋನಿ ವರ್ಮಾ ದಂಪತಿ 11ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ವೇಳೆ ಈ ದಂಪತಿ ಮತ್ತೆ ವಿವಾಹವಾಗಿದ್ದು, ಈ ಫೋಟೋಗಳನ್ನು ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂದ್ಹಾಗೆ ಪುತ್ರ ವೇದಾಂತ್ ಆಸೆಯಂತೆ ಈ ದಂಪತಿ ಮತ್ತೆ ಮದುವೆಯಾಗಿದ್ದು, “ಪುತ್ರನಿಗಾಗಿ ಮತ್ತೊಮ್ಮೆ ಮದುವೆ ಆದೆವು” ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಮದುವೆ ವಾರ್ಷಿಕೋತ್ಸವ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿದ ಪ್ರಕಾಶ್ ರಾಜ್, “ ನಮ್ಮ ಮಗ ನಮ್ಮ ಮದುವೆ ನೋಡಲು ಬಯಸಿದ್ದಕ್ಕೆ ಮತ್ತೆ ಮದ್ವೆಯಾದ್ವಿ” ಎಂದು ಬರೆದುಕೊಂಡಿದ್ದಾರೆ. ಪ್ರಕಾಶ್ ರಾಜ್ ದಂಪತಿಗೆ ಅಭಿಮಾನಿಗಳು ಕಾಮೆಂಟ್ ಮೂಲಕ ವಿಶ್ ಮಾಡುತ್ತಿದ್ದಾರೆ.
“ಆನೆ ನಡೆಯುವಾಗ ನಾಯಿ ಬೊಗಳುವುದು ಸಹಜ” : ಹೀಗೆ ಟ್ವೀಟ್ ಮಾಡಿದ್ದೇಕೆ ಜಗ್ಗೇಶ್