“ಆನೆ ನಡೆಯುವಾಗ ನಾಯಿ ಬೊಗಳುವುದು ಸಹಜ” : ಹೀಗೆ ಟ್ವೀಟ್ ಮಾಡಿದ್ದೇಕೆ ಜಗ್ಗೇಶ್ Sandalwood saaksha tv
ಬೆಂಗಳೂರು : ನವರಸನಾಯಕ ಜಗ್ಗೇಶ್ ಸಹೋದರ ನಟ ಕೋಮಲ್ ಅವರ ಹೆಸರು 1.72 ಕೋಟಿ ರೂ. ಸ್ವೆಟರ್ ಹಗರಣದಲ್ಲಿ ಕೇಳಿ ಬಂದಿದೆ.
ಅಲ್ಲದೆ ಈ ನಟ ಜಗ್ಗೇಶ್ ಬಿಬಿಎಂಪಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ರಾಜಮಾರ್ಗ, ಗಲ್ಲಿಯಲ್ಲಿ ಆನೆ ನಡೆಯುವಾಗ ನಾಯಿ ಬೊಗಳುವುದು ಸಹಜ ಎಂದಿದ್ದಾರೆ.
ಟ್ವಿಟ್ಟರ್ ನಲ್ಲಿ ನಟ ಜಗ್ಗೇಶ್ ಅವರು, ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯೆರ್ಥ ತೋರಿಕೆ ಏಕೆಬೇಕು.
ಆನೆ ರಾಜಮಾರ್ಗದಲ್ಲಿ ಆಗಲಿ, ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜವಾಗಿದೆ.
ನಮ್ಮಗುಣ ಆನೆಯಂತೆ ಇದ್ದಾಗ, ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು.
ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ.
ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ ಎಂದು ಬರೆದುಕೊಂಡಿದ್ದಾರೆ.









