ಸಂಚಾರಿ ವಿಜಯ್ ಅಗಲಿಕೆಗೆ ಕಂಬನಿ ಮಿಡಿದ ಸ್ಯಾಂಡಲ್ ವುಡ್ ತಾರೆಯರು
ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ನಿಧನದಿಂದ ಸ್ಯಾಂಡಲ್ ವುಡ್ ಆಘಾತಕ್ಕೆ ಒಳಗಾಗಿದೆ.. ಪ್ರತಿಭಾನ್ವಿತ ನಟನ ಅಗಲಿಕೆಗೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ. ಹಲವು ತಾರೆಯರು ಸಂತಾಪ ಸೂಚಿಸುತ್ತಿದ್ದಾರೆ.

ಬೈಕ್ ಅಪಘಾತದಿಂದಾಗಿ ಗಂಭೀರ ಗಾಯಗೊಂಡಿರುವ ನಟ ಸಂಚಾರಿ ವಿಜಯ್ ಅವರನ್ನು ನೆನೆದು ಸ್ಯಾಂಡಲ್‍ವುಡ್ ನಟ ನಿನಾಸಂ ಸತೀಶ್ ಅವರು ಕಣ್ಣೀರಿಟ್ಟಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು ಸಂಚಾರಿ ವಿಜಯ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್‍ಗೂ ಮುಂಚೆ ಅವರೊಂದಿಗೆ ಕೆಲ ಸಮಯ ಕಳೆದಿದ್ದೇನೆ. ಅವರ ಮುಂಬರುವ ಚಿತ್ರಕ್ಕಾಗಿ ಎಲ್ಲರೂ ಕಾಯುತ್ತಿದ್ದೆವು. ಆದರೆ ಇದೀಗ ಅವರು ನಿಧನರಾಗಿರುವ ಸುದ್ದಿ ಕೇಳಿ ಆಘಾತವಾಗಿದೆ. ಆ ದೇವರು ಅವರ ಕುಟುಂಬ ಹಾಗೂ ಗೆಳೆಯರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲು ಎಂದು ಬರೆದುಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಸಂಚಾರಿ ವಿಜಯ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ರಿಶಬ್ ಶೆಟ್ಟಿ ಅವರು ಟ್ವೀಟ್ ಮಾಡಿ , ಮತ್ತೆ ಹುಟ್ಟಿ ಬಾ ಗೆಳೆಯ ೆಂದು ಬರೆದುಕೊಂಡಿದ್ದಾರೆ.
ಇನ್ನೂ ರಕ್ಷಿತ್ ಶೆಟ್ಟಿ ಸಹ ಟ್ವೀಟ್ ಮಾಡಿದ್ದು, ನಿಮ್ಮ ನಿಧನವು ದೊಡ್ಡ ಆಘಾತವನ್ನು ತಂದುಬಿಟ್ಟಿದೆ. ಇದು ನಿರಾಶಾದಾಯಕವಾಗಿದೆ. ಕುಟುಂಬಕ್ಕೆ ಧರ್ಯ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಇನ್ನೂ ಶ್ರುತಿ ಹರಿಹರನ್ ಇನ್‍ಸ್ಟಾಗ್ರಾಮ್ ನಲ್ಲಿ ಸಂಚಾರಿ ವಿಜಯ್ ಅವರೊಂದಿಗೆ ಫೋಟೋಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ನೀವು ಮಾಡಿರುವ ಕೆಲಸವನ್ನು ಎಂದು ಮರೆಯಲು ಸಾಧ್ಯವಿಲ್ಲ. ನಾನು ನಿಮ್ಮ ಜೊತೆಗೆ ಕೆಲಸ ಮಾಡುವ ಅದೃಷ್ಟವನ್ನು ಪಡೆದಿದ್ದೆ. ಅತ್ಯಂತ ಅದ್ಭುತ ನಟರಲ್ಲಿ ನೀನು ಒಬ್ಬನು ಮತ್ತು ನಾನು ನಿನ್ನನ್ನು ಎಷ್ಟು ಮಿಸ್ ಮಾಕೊಳ್ಳುತ್ತಿದ್ದೇನು ಎನ್ನುವುದು ದೇವರಿಗೆ ತಿಳಿದಿದೆ. ಬಹಳಷ್ಟು ಪ್ರೀತಿ ಮತ್ತು ಅಪ್ಪುಗೆಗಳು ಸಂಚಾರಿವಿಜಯ್. ನಿಮ್ಮಂತಹ ಮನುಷ್ಯ ಈ ಮನುಷ್ಯರು ಜಗತ್ತಿನಲ್ಲಿ ಅಮರ ಎಂದು ಬರೆದುಕೊಂಡಿದ್ದಾರೆ. 
ನಟಿ ಅಮೂಲ್ಯ ಟ್ವೀಟ್ ಮಾಡಿ , ಇದು ಸರಿಯಲ್ಲ. ಅನಿರೀಕ್ಷಿತ ಅಪಘಾತದಿಂದ ಅಗಲಿದ ಪ್ರತಿಭಾವಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
ಬೈಕ್ ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಬೈಕ್ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ನಟನನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕುಟುಂಬಸ್ಥರು ವಿಜಯ್ ಅವರ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.










