ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ :  ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!

1 min read

ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ :  ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!

ದೇಶದಲ್ಲಿ ಕೊರೊನಾ 2 ನೇ ಅಲೆ ಹಿಂದೆಂದಿಗಿಂತಲೂ ಅತಿ ಭಯಾನಕವಾಗಿ ಭಾರತೀಯರನ್ನ ಕಾಡಲಾರಂಭಿಸಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಇದರ ಪ್ರಭಾಯ ಅತಿ ಭೀಕರವಾಗಿದೆ. ನಿತ್ಯ ದೇಶದಲ್ಲಿ ಸಾವಿರಾರು ಜನ ಚಿಕಿತ್ಸೆ ಫಲಿಸದೇ , ಆಕ್ಸಿಜನ್ ಕೊರೆತಯಿಂದು ಇನ್ನೂ ಕೆಲವರು ಬೆಡ್ ಸಿಗದೇ ಸಾಯುತ್ತಲೇ ಇದ್ದಾರೆ. ಇದ್ರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ ತಾರೆಯರು ಜನರ ಸಹಾಯಕ್ಕೆ ಮುಂದಾಗ್ತಿದ್ದಾರೆ. ಬಾಲಿವುಡ್ ನಟರಾದ ಸೋನು ಸೂದ್ , ಸುನಿಲ್ ಶೆಟ್ಟಿ , ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ ಹೀಗೆ ಅನೇಕರು ಬಡವರ ಪಾಲಿಗೆ ದೇವರಾಗಿ ಸಹಾಯ ಮಾಡ್ತಿದ್ದಾರೆ.

ಇದೀಗ ಸ್ಯಾಂಡಲ್ ವುಡ್ ನಟ  ಶಿವರಾಜ್ ಕುಮಾರ್ ನಟನೆಯ ರುಸ್ತುಂ, ಯುವರತ್ನ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿರುವ ಅರ್ಜುನ್ ಗೌಡ ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಜನರಿಗೆ ಅರ್ಜುನ್ ಗೌಡ ಸಹಾಯ ಮಾಡುತ್ತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಹಾಗೂ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಮೃತದೇಹಗಳನ್ನು ಸಾಗಿಸಲು ನೆರವಾಗ್ತಿದ್ದಾರೆ.

ಈಗಾಗಲೇ ಸಾಕಷ್ಟು ಮಂದಿಗೆ ಅರ್ಜುನ್ ಸಹಾಯ ಮಾಡಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಮಾನವೀಯ ಕೆಲಸಕ್ಕೆ ಮುಂದಾಗಿರುವ ಅರ್ಜುನ್ ಇನ್ನು 2 ತಿಂಗಳು ಇದೇ  ಕೆಲಸದಲ್ಲೇ ಮುಂದುವರೆಯಲಿದ್ದಾರಂತೆ. ಇಷ್ಟೇ ಅಲ್ದೇ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಸುತ್ತಿದ್ದಾರೆ.

ನಿಜಕ್ಕೂ ಅರ್ಜುನ್ ಗೌಡ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅನೇಕ ಸೆಲೆಬ್ರಿಟಿಗಳು ನಮಗ್ಯಾಕೆ ಅಂತ ಕೈಕಟ್ಟಿ ಕುಳಿತಿರುವಾಗ ಅರ್ಜುನ್ ಗೌಡ ತಮ್ಮ ಕೈಲಾದ ಸಹಾಯ ಮಾಡುತ್ತಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ನಟಿ ರಕ್ಷಿತಾ, ಪನ್ನಗಾಭರಣ ಸೇರಿದಂತೆ ಅನೇಕರು ಅರ್ಜುನ್ ಗೌಡಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd