Dhruva sarja: ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರ…
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮನೆಗೆ ಶೀಘ್ರವೇ ಹೊಸ ಸದಸ್ಯರ ಆಗಮನವಾಗಲಿದ್ದು , ಧ್ರುವ ಸರ್ಜಾ ಅವರ ಪರಿವಾರದಲ್ಲಿ ಸಂತಸ ಮನೆ ಮಾಡಿದೆ.. ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ..
ಇತ್ತೀಚೆಗೆ ಪ್ರೇರಣ ಅವರ ಅವರ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿದ್ದು ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ..
ಇತ್ತೀಚೆಗಷ್ಟೇ ಪತ್ನಿ ಪ್ರೇರಣಾರ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿದ್ದ ಧ್ರುವ ಸರ್ಜಾ ಅವರು ತಾವು ಶೀಘ್ರದಲ್ಲೇ ತಂದೆಯಾಗುತ್ತಿರುವ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದರು.. ಈ ದಂಪತಿಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ..
ಅಂದ್ಹಾಗೆ ಧ್ರುವ ಸರ್ಜಾ ಅವರು ಸದ್ಯ ಮಾರ್ಟಿನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ..
ಪ್ರೇರಣಾರಿಗೆ 9 ತಿಂಗಳಾಗಿದೆ. ಇದೇ ಸಮಯದಲ್ಲಿ ಸೀಮಂತ ಕಾರ್ಯ ನೆರವೇರಿಸಲಾಗಿದೆ.. ಇದೇ ತಿಂಗಳು ಧ್ರುವ ಸರ್ಜಾ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ.
ಅಂದ್ಹಾಗೆ BiggBoss ಖ್ಯಾತಿಯ ಪ್ರಥಮ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು.. ಜೊತೆಗೆ ಅರ್ಜುನ್ ಸರ್ಜಾ ಅವರು ಸಹ ತಮ್ಮ ಕುಟುಂಬದ ಸಂತೋಷದ ಘಳಿಗೆಯಲ್ಲಿ ಪಾಲ್ಗೊಂಡಿದ್ದರು..