ಸೆಪ್ಟೆಂಬರ್ 14 ರಂದು ಹಿಂದಿ ದಿಸವ್ ಆಚರಣೆ ಮಾಡಲಾಗುತ್ತಿದೆ. ಆದ್ರೆ ಹಿಂದಿ ದಿವಸ್ ಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಕನ್ನಡ ಪರ ಹೋರಾಟಗಾರರು ಕನ್ನಡಾಭಿಮಾನಿಗಳಷ್ಟೇ ಅಲ್ಲದೇ ಹಿಂದಿ ದಿವಸ್ ಆಚರಣೆಯನ್ನು ಕನ್ನಡದ ಕೆಲವು ಸಿನಿಮಾ ನಟರು ಸಹ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ “ನಾವು ಕನ್ನಡಿಗರು ತಮಗೆ ಹಿಂದಿ ಬರಲ್ಲ” ಎನ್ನುವ ಬರಹಗಳಿರುವ ಟೀ ಶರ್ಟ್ ಧರಿಸಿ ಹಿಂದೆ ಹೇರಿಕೆಯ ವಿರುದ್ಧ ಕನ್ನಡದ ನಾಯಕರು ಸಮರ ಸಾರಿದ್ದಾರೆ.
ಪ್ರಕಾಶ್ ರಾಜ್
ಈ ಬಗ್ಗೆ ಟ್ವೀಟ್ ಮಾಡಿರುವ ಹಿರಿಯ ಬಹುಭಾಷಾ ನಟ ಕಮ್ ರಾಜಕಾರಣಿ ಪ್ರಕಾಶ್ ರಾಜ್ ಅವರು ”ಹಲವು ಭಾಷೆ ಬಲ್ಲೆ.. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ.. ಆದರೆ ನನ್ನ ಕಲಿಕೆ..ನನ್ನ ಗ್ರಹಿಕೆ..ನನ್ನ ಬೇರು..ನನ್ನ ಶಕ್ತಿ…ನನ್ನ ಹೆಮ್ಮೆ..ನನ್ನ ಮಾತೃಭಾಷೆ ಕನ್ನಡ #ಹಿಂದಿ_ಹೇರಿಕೆ_ಬೇಡ ..NO” ಎಂದು ಟ್ವೀಟ್ ಮಾಡಿದ್ದಾರೆ.
ಡಾಲಿ ಧನಂಜಯ್
ಇನ್ನೂ ನಟ ಧನಂಜಯ್ ಅವರು ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ”ನನ್ನ ದೇಶ ಭಾರತ ನನ್ನ ಬೇರು ಕನ್ನಡ ಎಲ್ಲ ಭಾಷೆಯನ್ನು ಗೌರವಿಸುತ್ತೇನೆ ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ ಯಾವುದೇ ಹೇರಿಕೆ ಸಲ್ಲದು” ಎಂದು ಬರೆದುಕೊಂಡಿದ್ದಾರೆ.
ಆದಿನಗಳು ಚೇತನ್
ಇನ್ನೂ ಆದಿನಗಳು ಚೇತನ್ ಸಹ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದು ಹಿಂದಿ ಹೇರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಹಿಂದಿ ಗೊತ್ತಿಲ್ಲಾ ಹೋಗೋ ಎಂಬ ವಾಕ್ಯವಿರುವ ಟಿ ಶರ್ಟ್ ಧರಿಸಿ ಗಮನ ಸೆಳೆದಿದ್ದಾರೆ.