ಡೇಟಿಂಗ್ ಆಪ್ ಪ್ರಕರಣದಲ್ಲಿ ಬಂದಿತ ವ್ಯಕ್ತಿ ನಾನಲ್ಲ – ನ್ಯೂರಾನ್ ನಟ ಯುವ ಸ್ಪಷ್ಟನೆ..
ಡೇಟಿಂಗ್ ಆ್ಯಪ್ನಲ್ಲಿ ಮಹಿಳೆಯರ ನಕಲಿ ಫೋಟೊ ಸೃಷ್ಟಿಸಿ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಪ್ರಕರಣದಲ್ಲಿ ಕನ್ನಡದ ನಟನೊಬ್ಬನ ಹೆಸರು ಕೇಳಿ ಬಂದಿತ್ತು. ಈ ಸಂಬಂಧ ನಟ ಯುವ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.
ಅರೆಸ್ಟ್ ಆದ ವ್ಯಕ್ತಿ ಮತ್ತು ನನ್ನ ಪೋಟೋ ಸೇಮ್ ಇದೆ. “ನನ್ನನ್ನೇ ಹೋಲುವ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಆ್ಯಪ್ನಲ್ಲಿ ಯುವ ನಟ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪದಡಿ ಅವರನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿತ್ತು.
ನನ್ನ ಹಾಗೇ ಇರುವ ಮಂಜುನಾಥ್ ಅಲಿಯಾಸ್ ಸಂಜು ಎಂಬಾತನನ್ನು ವೇಶ್ಯಾವಾಟಿಕೆ ಆರೋಪದಡಿ ಬಂಧಿಸಿದ್ದಾರೆ. ಆದರೆ, ಮೀಡಿಯಾಗಳಲ್ಲಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಈ ಸುದ್ದಿ ನೋಡಿದಾಕ್ಷಣ ನಾನೇ ಆತಂಕಕ್ಕೆ ಒಳಗಾದೆ. ನನ್ನ ಸ್ನೇಹಿತರು, ಸಂಬಂಧಿಕರೆಲ್ಲರೂ ಫೋನ್ ಮಾಡಿ ವಿಚಾರಿಸಿದ್ದರು. ನಾನು ಮನೆಯಲ್ಲೇ ಇದ್ದೇನೆ. ನನ್ನನ್ನು ಪೊಲೀಸರು ಬಂಧಿಸಿಲ್ಲ” ಎಂದು ಹೇಳಿದ್ದಾರೆ.
Sandalwood: I am not the person caught in the dating app case – Neuron actor Yuva ..








