ಮೋಹಕತಾರೆ ಮತ್ತೆ ಕಂಬ್ಯಾಕ್ – ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ರಮ್ಯಾ ನಟನೆ…
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಂಬ್ಯಾಕ್ ಗೆ ಅಂತೂ ಕಾಲ ಕೂಡಿಬಂದಿದೆ. ರಾಜಕೀಯದ ನಂತರ ಬಣ್ಣದ ಜಗತ್ತಿನಿಂದ ದೂರವಿದ್ದ ಮೋಹಕ ತಾರೆ ಚಿತ್ರರಂಗಕ್ಕೆ ರೀ ಎಂಟ್ರೀ ನೀಡುತ್ತಿದ್ದಾರೆ. ರಮ್ಯಾ ಅವರನ್ನ ಕರೆತರುವಲ್ಲಿ ರಾಜ್ ಬಿ ಶೆಟ್ಟಿ ಯಶಸ್ವಿಯಾಗಿದ್ದಾರೆ.
ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ಚಿತ್ರ ಮಾಡುತ್ತಾರೆ ಎನ್ನುವ ಗಾಸಿಪ್ ಬಹುದಿನದಿಂದ ಹರಿದಾಡುತ್ತಿತ್ತು. ಇದೀಗ ಚಿತ್ರದ ಮಾಡುವ ಬಗ್ಗೆ ರಮ್ಯಾ ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದ್ದು ಸ್ವಾತಿ ಮುತ್ತಿನ ಮಳೆಹನಿಯೇ ಎಂಬ ಟೈಟಲ್ ಇಡಲಾಗಿದೆ.
ವಿಶೇಷವೆಂದರೆ ಈ ಸಿನಿಮಾವನ್ನ ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡುತ್ತಿದ್ದು, ಸ್ವತಃ ರಮ್ಯಾ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಗಷ್ಟೆ ಆಪಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದ ರಮ್ಯಾ ಇದೀಗ ಅದೇ ಬ್ಯಾನರ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.
ರಾಜ್ ಬಿ ಶೆಟ್ಟಿ ನಿರ್ದೇಶನ ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕೆಲಸ ಮಾಡಿದ ಹಲವು ತಂತ್ರಜ್ಞರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ಮುಂದುವರಿಯಲಿದ್ದಾರೆ. ವಿಧುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರಿಯಾನ್ ಛಾಯಾಗ್ರಹಣ ಮಾಡಲಿದ್ದಾರೆ.
Ramya: Sandalwood queen ramya announce comeback with new movie with raj b shetty