ADVERTISEMENT
Saturday, July 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Sandalwood : ರೂಪೇಶ್ ಶೆಟ್ಟಿ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದ ಟ್ರೇಲರ್ ರಿಲೀಸ್

ರೂಪೇಶ್ ಶೆಟ್ಟಿ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದ ಟ್ರೇಲರ್ ರಿಲೀಸ್- ಜನವರಿ 13ಕ್ಕೆ ಸಿನಿಮಾ ಬಿಡುಗಡೆ

Namratha Rao by Namratha Rao
March 6, 2023
in Cinema, News, Newsbeat, ಮನರಂಜನೆ
Sandalwood , roopesh shetty ,
Share on FacebookShare on TwitterShare on WhatsappShare on Telegram

Sandalwood : ರೂಪೇಶ್ ಶೆಟ್ಟಿ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದ ಟ್ರೇಲರ್ ರಿಲೀಸ್

ಗಗನ್. ಎಂ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಜನವರಿ13ಕ್ಕೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ, ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್ ಮುಖ್ಯ ಭೂಮಿಕೆಯ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದಿರುವ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

Related posts

lord-hanuman-vow-remedies-to-overcome-life-problems-in-3-weeks

Astro- ಜೀವನದಲ್ಲಿ ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!!

July 24, 2026
#BengaluruTuluvereChavadi #ParbadaLesa #TuluCulture #RavindraKalakshetra #TuluEvent #TuluNaduSiriAward #BabbuswamyDrama

Bengaluru -ಜುಲೈ 26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ಪರ್ಬದ ಲೇಸ್ ಕಾರ್ಯಕ್ರಮ

July 24, 2026

 

ನಿರ್ದೇಶಕ ಗಗನ್. ಎಂ ಮಾತನಾಡಿ ಕಿರುಚಿತ್ರ, ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದೇನೆ. ತುಳು ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಮಂಕು ಭಾಯ್ ಫಾಕ್ಸಿ ರಾಣಿ ನನ್ನ ನಿರ್ದೇಶನದ ಮೊದಲ ಸಿನಿಮಾ. ಮೊದಲು ಇದನ್ನು ಶಾರ್ಟ್ ಮೂವಿ ಮಾಡೋಣ ಎಂದು ಪ್ಲ್ಯಾನ್ ಮಾಡಿಕೊಂಡಿದ್ದೆ. ರೂಪೇಶ್ ಶೆಟ್ಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೇಗೆ ಬೇಕೋ ಹಾಗೆ ಸಿದ್ದ ಮಾಡಿಕೊಂಡ್ವಿ. 2019ರಲ್ಲಿ ಆರಂಭವಾದ ಸಿನಿಮಾವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಪೂರ್ತಿ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ಜನವರಿ 13ಕ್ಕೆ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

Sandalwood , roopesh shetty ,

ನಾಯಕಿ ಪಂಚಮಿ ರಾವ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ನಾನು ಕ್ಲಾಸಿಕಲ್ ಡಾನ್ಸರ್ ಕೂಡ ಹೌದು. ಸಿನಿಮಾ ರಂಗದ ಮೇಲೆ ಮೊದಲಿನಿಂದ ಆಸಕ್ತಿ ಇತ್ತು. ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ನಿರ್ದೇಶಕರು ಕಥೆ ಹೇಳಿದಾಗ ಕಥೆ ತುಂಬಾ ಯೂನೀಕ್ ಎನಿಸಿತು ಆದ್ರಿಂದ ಒಪ್ಪಿಕೊಂಡೆ. ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದ್ರು.

ಗೀತಾ ಭಾರತಿ ಭಟ್ ಮಾತನಾಡಿ ನನಗೆ ಈ ಪ್ರಾಜೆಕ್ಟ್ ಪರ್ಸನಲಿ ತುಂಬಾ ಸ್ಪೆಷಲ್. ಹಲವು ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದೇನೆ ಆದ್ರೆ ಲೀಡ್ ರೋಲ್ ನಲ್ಲಿ ಮಾಡಿರೋದು ಇದೇ ಮೊದಲು. ಶೂಟಿಂಗ್ ಅನುಭವ ತುಂಬಾ ಚೆನ್ನಾಗಿತ್ತು. ಆರಂಭದಲ್ಲಿ ಮಂಗಳೂರು ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದ್ರೆ ಶೂಟಿಂಗ್ ಮುಗಿಯುವ ಹೊತ್ತಿಗೆ ಪೂರ್ತಿ ಮಂಗಳೂರು ಕನ್ನಡ ಕಲಿತಿದ್ದೆ. ಸಿನಿಮಾ ಎರಡೂವರೆ ವರ್ಷದ ನಂತರ ತೆರೆ ಮೇಲೆ ಬರ್ತಿದೆ. ನನ್ನನ್ನು ನಾನು ತೆರೆ ಮೇಲೆ ನೋಡಿಕೊಂಡಾಗ ಇನ್ನಷ್ಟು ಮುಂದೆ ಹೋಗಲು ಆತ್ಮ ವಿಶ್ವಾಸ ಬಂದಿದೆ. ಸಿನಿಮಾ ಜನವರಿ13ಕ್ಕೆ ಬಿಡುಗಡೆಯಾಗ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದ್ರು.Sandalwood , roopesh shetty ,

ನಾಯಕ ನಟ ರೂಪೇಶ್ ಶೆಟ್ಟಿ ಮಾತನಾಡಿ ಈ ಸಿನಿಮಾ ಶೂಟ್ ಆಗಿ ಮೂರು ವರ್ಷ ಆಯ್ತು. ಚಿತ್ರದಲ್ಲಿ ಕಟೆಂಟ್ ಹೀರೋ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕೋ ಹುಡುಗನ ಕಥೆ ಚಿತ್ರದಲ್ಲಿದೆ. ಫ್ರೆಂಡ್ಸೇ ಆತನಿಗೆ ಪ್ರಪಂಚ ಇದರೊಂದಿಗೆ ಒಂದು ಮುಗ್ಧ ಲವ್ ಸ್ಟೋರಿ ಇರುವ ಸಿನಿಮಾ. ನಿರ್ದೇಶಕ ಗಗನ್ ಒಂದು ಕನ್ನಡ ಸಿನಿಮಾ ಮಾಡೋಣ ಎಂದಾಗ ಒಪ್ಪಿಕೊಂಡೆ. ನಾನು ಹೀರೋ ಎಂಟ್ರಿ ಕಮರ್ಶಿಯಲ್ ಆಗಿರಬೇಕು, ಹೀಗಿರಬೇಕು ಅಂದುಕೊಂಡಿದ್ದೆ ಆದ್ರೆ ಈ ಸಿನಿಮಾ ಪ್ಲಾಟ್ ಹಾಗಿರಲಿಲ್ಲ. ಚಿತ್ರಕ್ಕೆ ದಪ್ಪ ಆಗಬೇಕು, ದಾಡಿ ತೆಗಿಯಬೇಕು, ಯಕ್ಷಗಾನದಲ್ಲಿ ಸಿಂಹದ ಪಾತ್ರ ಮಾಡುವ ವ್ಯಕ್ತಿ ಪಾತ್ರ ಎಂದು ನಿರ್ದೇಶಕರು ಹೇಳಿದ್ರು. ಚಿತ್ರಕ್ಕಾಗಿ ಎಂಟು ಕೆಜಿ ದಪ್ಪ ಆಗಿದ್ದೆ. ಕನ್ನಡದಲ್ಲಿ ಲೀಡ್ ಆಗಿ ನಟಿಸುತ್ತಿರುವ ಐದನೇ ಸಿನಿಮಾವಿದು. ‘ಡೇಂಜರ್ ಝೋನ್’, ‘ಅನುಷ್ಕಾ’, ‘ನಿಶಬ್ಧ 2’, ‘ಗೋವಿಂದ ಗೋವಿಂದ’ ಸಿನಿಮಾ ಮಾಡಿದ್ದೇನೆ ಆಗೆಲ್ಲ ಆ ಸಿನಿಮಾದಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ ಆದ್ರೆ ಫಸ್ಟ್ ಟೈಂ ರೂಪೇಶ್ ಶೆಟ್ಟಿ ಸಿನಿಮಾ ಬರ್ತಿದೆ ಎಂದು ಎಲ್ಲರು ಹೇಳುತ್ತಿದ್ದಾರೆ ಇದು ತುಂಬಾ ಖುಷಿ ಕೊಡ್ತಿದೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ. ಜನವರಿ 13ಕ್ಕೆ ಸಿನಿಮಾ ಬಿಡುಗಡೆಯಾಗ್ತಿದೆ ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿ ಎಂದು ಸಂತಸ ಹಂಚಿಕೊಂಡ್ರು.

 

ನಿರ್ಮಾಪಕ ಜೋಶ್ವ ಜೈಶಾನ್ ಕ್ರಾಸ್ತ, ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿನ್ಯಾಸ್ ಮದ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ ಷಜಹಾನ್ ಕ್ಯಾಮೆರಾ ವರ್ಕ್, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಚಿತ್ರಕ್ಕಿದೆ. ಪ್ರಕಾಶ್ ತೂಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರ ಜನವರಿ 13ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

Sandalwood , roopesh shetty , manku bhai foxy rani

 

Tags: roopesh shettySandalwood
ShareTweetSendShare
Join us on:

Related Posts

lord-hanuman-vow-remedies-to-overcome-life-problems-in-3-weeks

Astro- ಜೀವನದಲ್ಲಿ ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!!

by admin
July 24, 2026
0

ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ  ಹರಕೆ ಮಾಡಿಕೊಂಡರೆ ,ಜೀವನದಲ್ಲಿ ಇರುವಂತಹ ಇಂತಹ ಕಷ್ಟಗಳುಇದು ಯಾವ ರೀತಿಯ ಕಷ್ಟವೇ ಆದರೂ ಸರಿ ಆಂಜನೇಯಸ್ವಾಮಿ ಕೃಪೆಯಿಂದ...

#BengaluruTuluvereChavadi #ParbadaLesa #TuluCulture #RavindraKalakshetra #TuluEvent #TuluNaduSiriAward #BabbuswamyDrama

Bengaluru -ಜುಲೈ 26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ಪರ್ಬದ ಲೇಸ್ ಕಾರ್ಯಕ್ರಮ

by admin
July 24, 2026
0

ಬೆಂಗಳೂರು ತುಳುವೆರೆ ಚಾವಡಿಯ 28ನೇ ವರ್ಷದ "ಪರ್ಬದ ಲೇಸ್" ಕಾರ್ಯಕ್ರಮ ಜುಲೈ 26ರಂದು ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿರುವ ಈ...

Astro- ಬಂಗಾರವನ್ನು ಖರೀದಿಸಲು ಆಗದವರು ಸಕಲ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಈ ವಿಧಾನ ಮಾಡಿ..!

Astro- ಬಂಗಾರವನ್ನು ಖರೀದಿಸಲು ಆಗದವರು ಸಕಲ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಈ ವಿಧಾನ ಮಾಡಿ..!

by admin
July 24, 2026
0

ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಕಟಾಕ್ಷ ಇರಬೇಕು ಅಂದರೆ ನಮ್ಮ ಮನೆಯಲ್ಲಿ ಯಾವುದೇ ದಾರಿದ್ರ ಬರಬಾರದು ಮತ್ತು ಯಾ ವಾಗಲೂ ಸುಖ ಶಾಂತಿಯಿಂದ ಇರಬೇಕು ಹಣಕ್ಕೆ ಕೊರತೆ ಬರಬಾರದು...

ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

by Shwetha
July 24, 2026
0

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ನಡೆಯನ್ನು ಬಿಜೆಪಿ ಕೇವಲ ರಾಜಕೀಯ ನಾಟಕ...

‘ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ’: ಸಂಸತ್‌ನಲ್ಲಿ ಖರ್ಗೆ ಆಕ್ರೋಶ

‘ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ’: ಸಂಸತ್‌ನಲ್ಲಿ ಖರ್ಗೆ ಆಕ್ರೋಶ

by Shwetha
July 24, 2026
0

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. Xನಲ್ಲಿ ವಿಡಿಯೊ ಹಂಚಿಕೊಂಡಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram