ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನ. ಈ ಹಿನ್ನೆಲೆ “ಬುದ್ದಿವಂತನಿಗೆ” ಶುಬಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ಯಾಮಡಲ್ ವುಡ್ ನ ಸ್ಟಾರ್ ನಟರು ಸಾಮಾಜಿಕ ಜಾಲತಾಣದಲ್ಲಿ ಉಪ್ಪಿ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ.
ದುನಿಯಾ ವಿಜಯ್
ದುನಿಯಾ ವಿಜಯ್ ಅವರು ಉಪೇಂದ್ರ ಅರೊಂದಿಗಿನ ಫೋಟೋವೊಂದನ್ನ ಶೇರ್ ಮಾಡಿಕೊಮಡು “ ಹ್ಯಾಪಿ ಬರ್ತ್ ಡೇ ಉಪ್ಪಿ ಸರ್ “ ಎಂದು ಟ್ವಿಟ್ ಮಾಡಿ ಶುಭಾಷಯ ತಿಳಿಸಿದ್ದಾರೆ.
ಡಾಲಿ ಧನಂಜಯ್
ಡಾಲಿ ಧನಂಜಯ್ ಅವರು ಸಿಂಪ್ ಆಗಿ ಸಿಂಪ್ಲಿಯಸ್ಟ್ ಆಗಿಯೇ ಬರ್ತ್ ಡೇ ವಿಷ್ ಮಾಡಿದ್ದಾರೆ. “ ಹ್ಯಾಪಿ ಬರ್ತ್ ಡೇ ಉಪ್ಪಿ ಸರ್” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಉಪ್ಪಿ ಅವರ ನಟನೆಯ ಹೊಸ ಚಿತ್ರ ಕಬ್ಜದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಅಂದ್ಹಾಗೆ ಇಂದು ಕೇವಲ ಉಪ್ಪಿ ಅವರ ಜನ್ಮದಿನ ಮಾತ್ರ ಅಲ್ಲ. ಸ್ಯಾಂಡಲ್ ವುಡ್ ಮೂವರು ತಾರೆಯರ ಬರ್ತ್ ಡೇ. ಸಾಹಸಸಿಂಹ ಡಾ. ವಿಷ್ಣುವರ್ಧನ್, ನಟಿ ಶೃತಿ ಅವರ ಜನ್ಮದಿನ ಕೂಡ. ಇನ್ನೂ ಮೂವರೂ ತಾರೆಯರಿಗೂ ಸಹ ಅಭಿಮಾನಿಗಳು, ತಾರೆಯರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡ್ತಿದ್ದಾರೆ.
ನವರಸ ನಾಯಕ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಅವರು ಟ್ವೀಟ್ ಮೂಲಕ ಉಪ್ಪಿ ಹಾಗೂ ಶೃತಿ ಅವರಿಗೆ ಜನ್ಮದಿನದ ಶುಭಕೋರಿದ್ದಾರೆ. “ ಆತ್ಮೀಯ ಕಲಾಬಂಧು, ಉಪೇಂದ್ರ ಹಾಗೂ ಶೃತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ನೂರ್ಕಾಲ ಸುಖವಾಗಿ ಬಾಳಿ” ಎಂದು ಶುಭ ಹಾರೈಸಿದ್ದಾರೆ.
ರಚಿತಾ ರಾಮ್
ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ “ ಹ್ಯಾಪಿ ಬರ್ತ್ ಡೇ ಟು ಯು “ ಎಂದು ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಹರಿಪ್ರಿಯ
ಇನ್ನೂ “ಉಗ್ರಂ” ಚೆಲುವೆ ಹರಿಪ್ರಿಯ ಸಹ ಉಪೇಂದ್ರ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. “ ಎ ವೆರಿ ಹ್ಯಾಪಿ ಬರ್ತ್ ಡೇ ಟು ಯು ಉಪ್ಪಿ ಸರ್ ಎಮದು ಬರೆದುಕೊಂಡಿದ್ದಾರೆ. ಅಲ್ಲದೇ ಉಪೇಂದ್ರ ಅವರ ಜೊತೆಗಿನ ತಮ್ಮ ಹೊಸ ಚಿತ್ರವಾದದ ಲಗಾಮ್ ನ ಪೋಸ್ಟರ್ ಸಹ ಶೇರ್ ಮಾಡಿಕೊಮಡಿರುವ ನಟಿ “ ಶೂಟಿಂಗ್ ಶೀಘ್ರವೇ ಶುರುವಾಗಲಿದೆ” ಎಂದು ತಿಳಿಸಿದ್ದಾರೆ.