ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಹೇರಲಾದ ಲಾಕ್‍ಡೌನ್ ವೇಳೆ ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರು ಡ್ರಗ್ಸ್ ದಾಸರಾಗಿದ್ರು ಎಂಬ ಸ್ಫೋಟಕ ಮಾಹಿತಿ ಬೆಚ್ಚಿ ಬೀಳುವಂತೆ ಮಾಡಿದೆ.
ಲಾಕ್‍ಡೌನ್ ವೇಳೆ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಎಣ್ಣೆ ಸಿಗದ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್‍ನ ನಟ-ನಟಿಯರು, ಕಿರುತೆರೆ ಕಲಾವಿದರು ಹಾಗೂ ಸಂಗೀತ ನಿರ್ದೇಶಕರು ಡ್ರಗ್ಸ್‍ಗೆ ದಾಸರಾಗಿರುವ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತಳಾಗಿರುವ ಕಿರುತೆರೆ ನಟಿ ಹಾಗೂ ಡ್ರಗ್ಸ್ ಡೀಲರ್ ಅನಿಕಾ ಹಲವು ಆಘಾತಕಾರಿ ಸಂತಿಗಳನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ಲಾಕ್‍ಡೌನ್ ವೇಳೆ ಸುಮಾರು 3 ಕೋಟಿಗೂ ಹೆಚ್ಚು ಡ್ರಗ್ಸ್ ನಟ-ನಟಿಯರಿಗೆ ಸಪ್ಲೈ ಮಾಡಿರುವುದಾಗಿ ಅನಿಕಾ ಒಪ್ಪಿಕೊಂಡಿದ್ದಾಳೆ.
ಸ್ಯಾಂಡಲ್‍ವುಡ್‍ನ 2 ಸಾವಿರಕ್ಕೂ ಹೆಚ್ಚು ನಟ-ನಟಿಯರಿಗೆ ಪ್ರತಿದಿನ ಅನಿಕಾ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳಂತೆ. ಅನಿಕಾ ಪೋನ್ ಕಾಲ್ ಲಿಸ್ಟ್ ನಲ್ಲಿ ಸ್ಯಾಂಡಲ್‍ವುಡ್‍ನ ನಟ-ನಟಿಯರ ಹೆಸರು ಪತ್ತೆಯಾಗಿರುವುದು ಕೆಲವರಿಗೆ ನಡುಕ ಉಂಟು ಮಾಡಿದೆ.
ಕಿರುತೆರೆಯ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಅನಿಕಾಗಳಿಗೆ ಸ್ಯಾಂಡಲ್ ವುಡ್‍ನ ಸ್ಟಾರ್ ನಟ-ನಟಿಯರ ಸಂಪರ್ಕ ಸಿಕ್ಕಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಅನಿಕಾ, ಸ್ಟಾರ್ ನಟರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳಂತೆ. ಹೀಗಾಗಿ ಆಕೆ ಯಾರ ಯಾರ ಹೆಸರು ಹೇಳಿದ್ದಾಳೋ, ವಿಚಾರಣೆಗೆ ಬರುವಂತೆ ನಮಗೂ ಸಿಸಿಬಿ ಪೊಲೀಸರು ನೋಟಿಸ್ ಕೊಡ್ತಾರಾ ಅನ್ನೋ ಟೆನ್ಶನ್ ನಟ-ನಟಿಯರರಿಗೆ ಶುರುವಾಗಿದೆ ಎನ್ನಲಾಗಿದೆ.