ಸಂಜನಾ ಗಲ್ರಾನಿ ಸಹೋದರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ಯಾರು..?

1 min read

ಸಂಜನಾ ಗಲ್ರಾನಿ ಸಹೋದರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ಯಾರು..?

ಬೆಂಗಳೂರು: ಸಂಜನಾ ಗಲ್ರಾನಿ ಸಹೋದರಿ ಬಹುಭಾಷಾ ನಟಿ ನಿಕಿ ಗಲ್ರಾನಿಗೆ ಹೋಟೆಲ್ ಮಾಲೀಕರೊಬ್ಬರು ಲಕ್ಷ ಲಕ್ಷ ಪಂಗನಾಮ ಹಾಕಿದ್ದು, ನಿಕ್ಕಿ ಗಲ್ರಾನಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ಕೋರಮಂಗಲದ ರೆಸ್ಟೋರೆಂಟ್ ವೊಂದರ ಮಾಲೀಕ ನಿಖಿಲ್ ಹೆಗ್ಡೆ ಎಂಬಾತ ನಿಕ್ಕಿ ಗಲ್ರಾನಿ ಬಳಿ 50 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿಕ್ಕಿ ಗಲ್ರಾನಿ ದೂರು ಆಧಾರಿಸಿ ನಿಖೀಲ್ ಹೆಗ್ಡೆ ವಿರುದ್ಧ ಎಫ್ ಐಆರ್ ದಾಖಲಾಗಿದೆ. 2016ರ ಡಿಸೆಂಬರ್ನಲ್ಲಿ ರೆಸ್ಟೋರೆಂಟ್ ಸ್ಥಾಪನೆಗೆ ನಿಕ್ಕಿ 50 ಲಕ್ಷ ರೂ. ಹೂಡಿಕೆ ಮಾಡಿದ್ದರಂತೆ. ಪ್ರತಿ ತಿಂಗಳು ಲಾಭವಾಗಿ ಒಂದು ಲಕ್ಷ ನೀಡುವುದಾಗಿ ಹೇಳಿದ್ದರು.

ಇದನ್ನ ನಂಬಿ ನಿಖೀಲ್ ಹೆಗ್ಡೆಗೆ ನನ್ನ ಪೋಷಕರ ಸಮ್ಮುಖದಲ್ಲಿ ಅಗ್ರಿಮೆಂಟ್ ಮಾಡಿ 50 ಲಕ್ಷ ರೂ. ಹಣ ಕೊಟ್ಟಿದ್ದೆ. ಆದ್ರೆ ಅದಾದ ನಂತರ ನನಗೆ ಯಾವುದೇ ರೀತಿಯ ಲಾಭದ ಹಣ ಕೊಡದೇ, ರೆಸ್ಟೋರೆಂಟ್ ವ್ಯವಹಾರಕ್ಕೆ ಕೊಟ್ಟ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಂಜಾನ್ ಉಪವಾಸ ಆರಂಭ – ಆದ್ರೆ ಕೋವಿಡ್ ಗೈಡ್ ಲೈನ್ಸ್ ಫಾಲೋ ಮಾಡ್ಲೇ ಬೇಕು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd