Rishabh Pant : ಪಂತ್ ಓಪನರ್ ಆದ್ರೆ ಗಿಲ್‌ಕ್ರಿಸ್ಟ್ ನಂತೆ ಆಡ್ತಾರೆ

1 min read
sanjay-bangar-suggests-opening-role-rishabh-pant saaksha tv

sanjay-bangar-suggests-opening-role-rishabh-pant saaksha tv

Rishabh Pant : ಪಂತ್ ಓಪನರ್ ಆದ್ರೆ ಗಿಲ್‌ಕ್ರಿಸ್ಟ್ ನಂತೆ ಆಡ್ತಾರೆ

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ತವರಿನಲ್ಲಿ ನಡೆದ ಸರಣಿಯನ್ನು ಟೀಂ ಇಂಡಿಯಾ 2-2 ಅಂತರದೊಂದಿಗೆ ಡ್ರಾ ಮಾಡಿಕೊಂಡಿದೆ.

ಆದರೆ, ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ರಿಷಬ್ ಪಂತ್ ಕಳಪೆ ಪ್ರದರ್ಶನ ನೀಡಿದ್ದರು.

ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಪಂತ್ ಕೇವಲ 57 ರನ್ ಗಳಿಸಿದ್ದರು. ಸರಣಿಯಲ್ಲಿನ ಅವರ ಪ್ರದರ್ಶನವನ್ನು ಮಾಜಿ ಕ್ರಿಕೆಟಿಗರು ಟೀಕಿಸುತ್ತಿದ್ದಾರೆ.

ಮತ್ತೊಂದೆಡೆ 37 ಹರೆಯದ ಅನುಭವಿ ದಿನೇಶ್ ಕಾರ್ತಿಕ್ ಧೂಳೆಬ್ಬಿಸುತ್ತಿದ್ದಾರೆ.

ಇದರೊಂದಿಗೆ ಬಾರಿಯ ಟಿ20 ವಿಶ್ವಕಪ್ಗೆ ಕಾರ್ತಿಕ್ ಅವರನ್ನು ಪಂತ್ ಬದಲಿಗೆ ಆಯ್ಕೆ ಮಾಡಬೇಕು ಎಂದು ಹಲವು ಮಾಜಿಗಳು ಅಭಿಪ್ರಾಯಪಟ್ಟಿದ್ದಾರೆ.

ಸರಣಿಯಲ್ಲಿ ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಪಂತ್ಬಗ್ಗೆ ತಮ್ಮದೇಯಾದ ವಾದವನ್ನು ಮಂಡಿಸಿದ್ದಾರೆ.  

sanjay-bangar-suggests-opening-role-rishabh-pant saaksha tv
sanjay-bangar-suggests-opening-role-rishabh-pant saaksha tv

ರಿಷಬ್ ಪಂತ್ ಅವರು ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಬೇಕಾದರೆ ಆರಂಭಿಕರಾಗಿ ಬ್ಯಾಟ್ ಬೀಸಬೇಕು ಎಂದು ಬಂಗಾರ್ ಸಲಹೆ ನೀಡಿದ್ದಾರೆ.

ಅಲ್ಲದೆ ಅವರು ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ

ಸಚಿನ್ ತೆಂಡೂಲ್ಕರ್ 75 ಇನ್ನಿಂಗ್ಸ್ಗಳ ನಂತರ ತಮ್ಮ ODI ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಾಗಿ ಬ್ಯಾಟ್ ಮಾಡಿದ ಸಚಿನ್ ಉತ್ತಮ ಪ್ರದರ್ಶನ ನೀಡಲಿಲ್ಲ.

ಆದಾಗ್ಯೂ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಬಂದ ಸಚಿನ್ ತಮ್ಮ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದರು.

ಪ್ರಸ್ತುತ ಭಾರತ ತಂಡವು ಎಡಬಲ ಸಂಯೋಜನೆಯತ್ತ ನೋಡುತ್ತಿದೆ. ಇಶಾನ್ ಕಿಶನ್ ಇದೀಗ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಭಾರತ ಸಂಯೋಜನೆಯನ್ನು ದೀರ್ಘಕಾಲ ಮುಂದುವರಿಸಲು ಬಯಸಿದರೆ.. ಪಂತ್ ಕೂಡ ಆರಂಭಿಕರಾಗಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಓಪನರ್ಆಡಮ್ ಗಿಲ್ಕ್ರಿಸ್ಟ್ ಹೇಗೆ ಆರಂಭಿಕರಾಗಿ ಮಿಂಚಿದ್ರೋ ಅದೇ ರೀತಿ ಪಂತ್ ಅಬ್ಬರಿಸಲಿದ್ದಾರೆ ಎಂದು ಬಂಗಾರ್ ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd