Sanju Samson ಭಾರತ ಎ ತಂಡಕ್ಕೆ ನಾಯಕನಾಗಿ ಸಂಜು ಸ್ಯಾಮ್ಸನ್ ಆಯ್ಕೆ..
ಮುಂಬೈ: ನ್ಯೂಜಿಲೆಂಡ್ ಎ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಭಾರತ ಎ ತಂಡವನ್ನು ಪ್ರಕಟಿಸಿದೆ.
ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆಯಲಿರುವ ಸರಣಿಯಲ್ಲಿ 16 ಆಟಗಾರರನ್ನೊಳಗೊಂಡ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಿದೆ. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
ಪೃಥ್ವಿ ಶಾ ಮತ್ತು ಋತುರಾಜ್ ಗಾಯಕ್ವಾಡ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿ ತಾರಾ ಬೌಲರ್ಗಳಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಟಿ20 ಸರಣಿಗೆ ಪಾದಾರ್ಪಣೆ ಮಾಡಿದ್ದ ವೇಗಿ ಉಮ್ರಾನ್ ಮಲ್ಲಿಕ್ಗೂ ಅವಕಾಶ ನೀಡಲಾಗಿದೆ.
ಕಳೆದ ವರ್ಷ ಅಂಡರ್ 19 ವಿಶ್ವಕಪ್ನಲ್ಲಿ ಮಿಂಚಿದ್ದ ರಾಜ್ ಬಾವೂಗೂ ಮಣೆ ಹಾಕಲಾಗಿದೆ.ಈ ಯುವ ಆಲ್ರೌಂಡರ್ 31 ರನ್ ಗೆ 5 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ರಾಜ್ ಬಾವಾ ಎರಡು ರಣಜಿ ಪಂದ್ಯಗಳನ್ನು ಮತ್ತು ಎರಡು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
ಭಾರತ ಎ ತಂಡ: ಪೃಥ್ವಿ ಶಾ, ಅಭಿಮನ್ಯ ಈಶ್ವರನ್, ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಟಿಧಾರ್, ಸಂಜು ಸ್ಯಾಮ್ಸನ್, ಕೆಎಸ್ ಭರತ್(ಉಪನಾಯಕ), ಕುಲದೀಪ್ ಯಾದವ್, ಶಾಬಾಜ್ ಅಹ್ಮದ್, ರಾಹುಲ್ ಚಾಹರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲ್ಲಿಕ್, ನವದೀಪ್ ಸೈನಿ, ರಾಜ್ ಬಾವಾ.i