ಸಂಕೀರ್ತನಾ ಯಾತ್ರೆ | ಶ್ರೀರಂಗಪಟ್ಟಣ ಕೇಸರಿ ಮಯ Sankirthana yatra saaksha tv
ಮಂಡ್ಯ : ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ಆರಂಭವಾಗಿದ್ದು, ಶ್ರೀರಂಗಪಟ್ಟಣ ಸಂಪೂರ್ಣ ಕೇಸರಿ ಮಯವಾಗಿದೆ. ನಗರದ ನಿಮಿಷಾಂಬಾ ದೇವಸ್ಥಾನದಿಂದ ಯಾತ್ರೆ ಆರಂಭವಾಗಿದ್ದು, ಸಾವಿರಾರು ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗಿದ್ದಾರೆ.
ಸುಮಾರು 6 ಕಿಲೋಮೀಟರ್ ಪಾದಯಾತ್ರೆ ನಡೆಯಲಿದ್ದು, ಮಾಲಾಧಾರಿಗಳು ಜೈ ಶ್ರೀರಾಮ್, ಜೈ ಹನುಮ ಎಂದು ಘೋಷಣೆ ಮೊಳಗಿಸುತ್ತಿದ್ದಾರೆ.
ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಭಾಗಿಯಾಗಿದ್ದು, ನಿಮಿಷಾಂಭ, ಗಂಜಾಂ, ಶ್ರೀರಂಗಪಟ್ಟಣ ಬಸ್ ನಿಲ್ದಾಣ, ಜಾಮೀಯಾ ಮಸೀದಿ, ಪೇಟೆ ಬೀದಿ ರಸ್ತೆಗಳಲ್ಲಿ ಮೆರವಣಿಗೆ ನಡೆಯುತ್ತಿದೆ.
ಯಾತ್ರೆಯಲ್ಲಿ ಹೆಚ್ಚಿನ ಮಾಲಾಧಾರಿಗಳು ಭಾಗಿಯಾಗಿರುವುದರಿಂದ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ.
ಈ ಮಧ್ಯೆ ಸಂಕೀರ್ತನಾ ಯಾತ್ರೆಯ ಮಧ್ಯೆ ಮುಸ್ಲಿಂ ಯುವಕ ಬಂದಿದ್ದು, ಹನುಮ ಮಾಲಾಧಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದನಂತೆ. ಹೀಗಾಗಿ ಮುಸ್ಲಿಂ ಯುವಕನನ್ನು ಹನುಮ ಮಾಲಾಧಾರಿಗಳು ಥಳಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.