ADVERTISEMENT
Friday, October 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸನೋಫಿ ಕನ್ಸ್ಯೂಮರ್‌ ಲಾಭದಲ್ಲಿ ಭರ್ಜರಿ 22.2% ಏರಿಕೆ, ಒಂದೇ ದಿನ ಶೇ. 13.52ರಷ್ಟು ಜಿಗಿದ ಷೇರು!

admin by admin
October 30, 2026
in Newsbeat, National, ದೇಶ - ವಿದೇಶ
sanofi-consumer-healthcare-india-q3-profit-rises-22-2-percent-share-price-jumps

sanofi-consumer-healthcare-india-q3-profit-rises-22-2-percent-share-price-jumps

Share on FacebookShare on TwitterShare on WhatsappShare on Telegram

ಬೆಂಗಳೂರು: ‘ಕಾಂಬಿಫ್ಲಾಮ್’, ‘ಅಲೆಗ್ರಾ’ ದಂತಹ ಜನಪ್ರಿಯ ಔಷಧಿಗಳ ತಯಾರಕ ಕಂಪನಿ ‘ಸನೋಫಿ ಕನ್ಸ್ಯೂಮರ್ ಹೆಲ್ತ್‌ಕೇರ್ ಇಂಡಿಯಾ’ 3ನೇ ತ್ರೈಮಾಸಿಕದಲ್ಲಿ ಭರ್ಜರಿ ಸಾಧನೆ ಮಾಡಿದೆ. ಕಂಪನಿಯ ನಿವ್ವಳ ಲಾಭ ಶೇ. 22ರಷ್ಟು ಏರಿಕೆ ಕಂಡಿರುವ ಬೆನ್ನಲ್ಲೇ, ಕಂಪನಿಯ ಷೇರುಗಳ ಬೆಲೆ ಗಣನೀಯವಾಗಿ ಜಿಗಿದಿವೆ.

ಕಂಪನಿಯ ಅದ್ಭುತ ತ್ರೈಮಾಸಿಕ ವರದಿಯ ಬೆನ್ನಲ್ಲೇ ಹೂಡಿಕೆದಾರರು ಸನೋಫಿ ಷೇರು ಬೆಲೆ ಬೆಳಗ್ಗಿನ ವಹಿವಾಟಿನಲ್ಲಿ ಶೇ. 13ಕ್ಕಿಂತ ಹೆಚ್ಚು ಏರಿಕೆ ಕಂಡು ಇಂಟ್ರಾಡೇ ವಹಿವಾಟಿನಲ್ಲಿ ಗರಿಷ್ಠ 3,751.70 ರೂ. ತಲುಪಿತ್ತು. ಇಂಟ್ರಾಡೇ ಕನಿಷ್ಠ ದರ 3,430 ರೂ. ಆಗಿದೆ.

Related posts

asci-exposes-misleading-health-supplement-advertisements-a-pill-for-thought-report

’60 ದಿನದಲ್ಲಿ 6 ಕೆಜಿ ತೂಕ ಇಳಿಸಿ’, ‘ವಯಸ್ಸಾಗೋದನ್ನ ತಡೆಯಿರಿ’… ಹೆಲ್ತ್ ಸಪ್ಲಿಮೆಂಟ್ ಜಾಹೀರಾತುಗಳ ಬಣ್ಣ ಬಯಲು ಮಾಡಿದ ASCI

October 30, 2026
ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದ ಡಿ ಬಾಸ್! ಧನ್ವೀರ್ ಗೆ ದರ್ಶನ್ ಖಡಕ್ ವಾರ್ನಿಂಗ್

ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದ ಡಿ ಬಾಸ್! ಧನ್ವೀರ್ ಗೆ ದರ್ಶನ್ ಖಡಕ್ ವಾರ್ನಿಂಗ್

October 29, 2026

ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಸಾಧನೆ

ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ ಅತ್ಯುತ್ತಮ ಪ್ರದರ್ಶನ ದಾಖಲಿಸಿದ್ದು ನಿವ್ವಳ ಲಾಭವು ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 63 ಕೋಟಿ ರೂ.ಗಳಿಂದ ಶೇ. 22.2ರಷ್ಟು ಗಣನೀಯ ಏರಿಕೆ ಕಂಡು 77 ಕೋಟಿ ರೂ.ಗಳಿಗೆ ತಲುಪಿದೆ.

ಅದೇ ರೀತಿ, ಕಂಪನಿಯ ಒಟ್ಟು ಆದಾಯವು ಕಳೆದ ವರ್ಷದ 234 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 12.4ರಷ್ಟು ಹೆಚ್ಚಾಗಿದ್ದು, ಒಟ್ಟು 263 ಕೋಟಿ ರೂ.ಗೆ ಮುಟ್ಟಿದೆ. ಕಾರ್ಯಾಚರಣೆಯ ಮಟ್ಟದಲ್ಲೂ ಉತ್ತಮ ಪ್ರಗತಿ ಕಂಡುಬಂದಿದ್ದು, ಕಾರ್ಯಾಚರಣೆ ಲಾಭ (ಎಬಿಟ್ಡಾ) ಶೇ. 19.5ರಷ್ಟು ಏರಿಕೆಯೊಂದಿಗೆ 85 ಕೋಟಿ ರೂ.ಗಳಿಂದ 102 ಕೋಟಿ ರೂ.ಗಳಿಗೆ ಮುಟ್ಟಿದೆ.

ಇದರ ಪರಿಣಾಮವಾಗಿ ಕಾರ್ಯಾಚರಣೆಯ ಮಾರ್ಜಿನ್ ಶೇ. 36.4ರಿಂದ ಶೇ. 38.7ಕ್ಕೆ ಸುಧಾರಣೆ ಕಂಡಿದೆ. ಇವೆಲ್ಲದರ ಜೊತೆಗೆ, ಭಾರತದೊಳಗಿನ ದೇಶೀಯ ಮಾರಾಟದಲ್ಲಿ ಶೇ. 19ರಷ್ಟು ಭಾರಿ ಏರಿಕೆಯಾಗಿದೆ.

ಕಳೆದ 9 ತಿಂಗಳಲ್ಲೂ ಉತ್ತಮ ಸಾಧನೆ

ಕೇವಲ 3ನೇ ತ್ರೈಮಾಸಿಕ ಮಾತ್ರವಲ್ಲ, ಈ ವರ್ಷದ ಕಳೆದ 9 ತಿಂಗಳ ಲೆಕ್ಕಾಚಾರದಲ್ಲೂ ಕಂಪನಿಯ ಆದಾಯ ಶೇ. 16 ರಷ್ಟು ಹಾಗೂ ರಫ್ತು ಪ್ರಮಾಣ ಶೇ. 19ರಷ್ಟು ಪ್ರಗತಿ ಸಾಧಿಸಿದೆ.

ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಿಮಾಂಶು ಬಕ್ಷಿ, “ನಮ್ಮ ಸ್ಪಷ್ಟ ಕಾರ್ಯತಂತ್ರ ಮತ್ತು ಬ್ರಾಂಡ್‌ಗಳ ಸಾಮರ್ಥ್ಯಕ್ಕೆ ಈ ಸಾಧನೆಯೇ ಕನ್ನಡಿಯಾಗಿದೆ. ಪ್ರಮುಖ ಬ್ರಾಂಡ್‌ಗಳ ಮಾರಾಟ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ನಮ್ಮ ಪಾಲು ವಿಸ್ತರಣೆಯಾಗಿದೆ. ವಿತರಣಾ ಜಾಲವನ್ನು ವಿಸ್ತರಿಸಲು ನಾವು ಮಾಡಿದ ಹೂಡಿಕೆಗಳು, ಇಂದು ಹೆಚ್ಚಿನ ಗ್ರಾಹಕರಿಗೆ ಸೇವೆ ಒದಗಿಸಲು ನಮಗೆ ನೆರವಾಗುತ್ತಿವೆ,” ಎಂದಿದ್ದಾರೆ.

2024ರ ಜೂನ್ 1 ರಂದು ‘ಸನೋಫಿ ಇಂಡಿಯಾ ಲಿಮಿಟೆಡ್’ನಿಂದ ಪ್ರತ್ಯೇಕಗೊಂಡು ಕನ್ಸ್ಯೂಮರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿ, ಗ್ರಾಹಕರಿಗೆ ಚಿರಪರಿಚಿತವಾಗಿರುವ ಅಲೆಗ್ರಾ, ಡಿಪುರಾ, ಎವಿಲ್ ಮತ್ತು ಕಾಂಬಿಫ್ಲಾಮ್ನಂತಹ ಯಶಸ್ವಿ ಹೆಲ್ತ್‌ಕೇರ್ ಬ್ರಾಂಡ್‌ಗಳನ್ನು ಹೊಂದಿದೆ.

ShareTweetSendShare
Join us on:

Related Posts

asci-exposes-misleading-health-supplement-advertisements-a-pill-for-thought-report

’60 ದಿನದಲ್ಲಿ 6 ಕೆಜಿ ತೂಕ ಇಳಿಸಿ’, ‘ವಯಸ್ಸಾಗೋದನ್ನ ತಡೆಯಿರಿ’… ಹೆಲ್ತ್ ಸಪ್ಲಿಮೆಂಟ್ ಜಾಹೀರಾತುಗಳ ಬಣ್ಣ ಬಯಲು ಮಾಡಿದ ASCI

by admin
October 30, 2026
0

ಆರೋಗ್ಯದ ಕಾಳಜಿಯಿಂದ ನೀವು ಹೆಲ್ತ್ ಸಪ್ಲಿಮೆಂಟ್ಸ್ (ನ್ಯೂಟ್ರಾಸುಟಿಕಲ್ಸ್), ಪ್ರೋಟೀನ್ ಪೌಡರ್ ಅಥವಾ ವಿಟಮಿನ್ ಮಾತ್ರೆಗಳನ್ನು ಖರೀದಿಸುತ್ತಿದ್ದೀರಾ? ಟಿವಿ, ಮೊಬೈಲ್‌ಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಈ ಉತ್ಪನ್ನಗಳು 'ಮ್ಯಾಜಿಕ್'...

ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದ ಡಿ ಬಾಸ್! ಧನ್ವೀರ್ ಗೆ ದರ್ಶನ್ ಖಡಕ್ ವಾರ್ನಿಂಗ್

ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದ ಡಿ ಬಾಸ್! ಧನ್ವೀರ್ ಗೆ ದರ್ಶನ್ ಖಡಕ್ ವಾರ್ನಿಂಗ್

by Shwetha
October 29, 2026
0

ಸ್ಯಾಂಡಲ್ ವುಡ್ ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿದ್ದು, ಸಂಕಷ್ಟಗಳ ಸರಮಾಲೆಯಲ್ಲೇ ಸಿಲುಕಿದ್ದಾರೆ. ಆದರೆ, ಇದೀಗ ಅವರ ಆಪ್ತ ವಲಯದಲ್ಲೇ...

ಅರಮನೆ ನಮ್ದು ಜಾಗನೂ ನಮ್ದು ರಾಜಮಾತೆಗೆ ಸಚಿವ ಯತೀಂದ್ರ ಖಡಕ್ ವಾರ್ನಿಂಗ್! ಮೈಸೂರು ದಸರಾ ವಿಚಾರದಲ್ಲಿ ಪ್ರಜಾಪ್ರಭುತ್ವ ವರ್ಸಸ್ ರಾಜಮನೆತನದ ಮಹಾ ಸಂಘರ್ಷ!

ಅಂಬಾರಿಗೆ ಹಣ ಕೊಡ್ತೀವಿ ಅಷ್ಟೇ ಸಂಧಾನದ ಅಗತ್ಯವಿಲ್ಲ:ಯಾರ ಮುಂದೆಯೂ ತಲೆ ಬಾಗಲ್ಲ ರಾಜಮಾತೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ ಸಚಿವ ಯತೀಂದ್ರ!

by Shwetha
October 29, 2026
0

ಮೈಸೂರಿನ ಅರಮನೆಯ ಇತಿಹಾಸ ಮತ್ತು ಪ್ರಜಾಪ್ರಭುತ್ವದ ಅಧಿಕಾರದ ನಡುವಿನ ಸಮರ ಈಗ ಸಂಘರ್ಷದ ತುತ್ತತುದಿಗೆ ತಲುಪಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಅಸಮಾಧಾನದ ಪತ್ರಕ್ಕೆ ಮೊದಲು ಸ್ಫೋಟಕ...

ನವೆಂಬರ್‌ 1ರಿಂದ ಎಲ್‌ಪಿಜಿ ಸಿಲಿಂಡರ್‌ ವಿಚಾರದಲ್ಲಿ ಏನು ಬದಲಾವಣೆ? ಗ್ರಾಹಕರು ತಿಳಿಯಬೇಕಾದ ಮಾಹಿತಿ

ನವೆಂಬರ್‌ 1ರಿಂದ ಎಲ್‌ಪಿಜಿ ಸಿಲಿಂಡರ್‌ ವಿಚಾರದಲ್ಲಿ ಏನು ಬದಲಾವಣೆ? ಗ್ರಾಹಕರು ತಿಳಿಯಬೇಕಾದ ಮಾಹಿತಿ

by Shwetha
October 29, 2026
0

ನವೆಂಬರ್‌ 1ರಿಂದ ಎಲ್‌ಪಿಜಿ ಸಿಲಿಂಡರ್‌ ಬೆಲೆ, ಬುಕಿಂಗ್‌ ನಿಯಮಗಳು ಮತ್ತು ವಿತರಣಾ ವ್ಯವಸ್ಥೆಯ ಕುರಿತು ಗ್ರಾಹಕರ ಗಮನ ಮತ್ತೆ ಹೆಚ್ಚಾಗಿದೆ. ಇಂಡೇನ್‌, ಎಚ್‌ಪಿ ಗ್ಯಾಸ್‌ ಮತ್ತು ಭಾರತ್‌...

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಸಾರ್ವಜನಿಕ ಮತದಾನಕ್ಕೂ ಪರಿಷತ್ ಚುನಾವಣೆಗೂ ವ್ಯತ್ಯಾಸ ಗೊತ್ತಿಲ್ಲವೇ?: ಬ್ಯಾಲೆಟ್ ಪೇಪರ್ ಸೋಲಿನ ಅಪಹಾಸ್ಯಕ್ಕೆ ಪ್ರಿಯಾಂಕ್ ಖರ್ಗೆ ಖಡಕ್ ತಿರುಗೇಟು

by Shwetha
October 29, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಿದರೂ ಕಾಂಗ್ರೆಸ್ ಸೋತಿದೆ ಎಂಬ ಬಿಜೆಪಿಯ ವ್ಯಂಗ್ಯಭರಿತ ದಾಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಈಗ ಅತ್ಯಂತ ತರ್ಕಬದ್ಧ ಮತ್ತು ತೀಕ್ಷ್ಣವಾದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram