Sara Abubakar : ಕನ್ನಡದ ಹಿರಿಯ ಸಾಹಿತಿ ಸಾರ ಅಬೂಬಕ್ಕರ್ ವಿಧಿವಶ…
ಮುಸ್ಲಿಂ ಹೆಣ್ಣು ಮಕ್ಕಳದ ಶಿಕ್ಷಣದ ಕುರಿತು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ಹಿರಿಯ ಸಾಹಿತಿ, ಕಾದಂಬರಿಗಾರ್ತಿ, ನಾಡೋಜ ಸಾರಾ ಅಬೂಬಕ್ಕರ್ ಅವರು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸಿಸುತ್ತಿದ್ದ 86 ವರ್ಷ ವಯಸ್ಸಿನ ಸಾರಾ ಅಬೂಬಕ್ಕರ್ ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಂದು ರಾತ್ರಿ 8 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ. ಸಾರಾ ಅಬೂಬಕ್ಕರ್ ಅವರು ನಾಲ್ವರು ಪುತ್ರರು ಅಪಾರ ಬಂಧುಗಳು ಸೇರಿದಂತೆ ಅಪಾರ ಓದುಗ ಅಭಿಮಾನಿಗಳನ್ನ ಅಗಲಿದ್ದಾರೆ.
ಕಾಸರಗೋಡಿನ ಚಂದ್ರಗಿರಿಯಲ್ಲಿ ಜೂನ್ 30, 1936 ರಂದು ಹುಟ್ಟಿ ಬೆಳೆದ ಸಾರಾ ಅಬೂಬಕ್ಕರ್ ಅವರು ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದರು. ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಜನಪ್ರಿಯವಾಗಿ ಗಮನ ಸೆಳೆದಿದ್ದರು.
Sara Abubakar: Senior Kannada writer Sara Abubakar passed away…








