Sarfaraz Ahmed | ಭಾರತದ ವಿರುದ್ಧ ಗೆಲ್ಲೋದು ನಾವೇ
ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ಕಾತರದಿಂದ ಕಾಯುತ್ತಿರುವ ಇಂಡೋ ಪಾಕ್ ಮ್ಯಾಚ್ ಗೆ ಕ್ಷಣಗಣನೆ ಶುರುವಾಗಿದೆ.
ಏಷ್ಯಾಕಪ್ 2022ರ ಭಾಗವಾಗಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೆಣಸಲಿದೆ.
ಹೀಗಾಗಿ ಹಿರಿಯ ಕ್ರಿಕೆಟಿಗರು ಸೋಲು ಗೆಲುವಿನ ಭವಿಷ್ಯ ಹೇಳುತ್ತಿದ್ದಾರೆ.
ಆ ಸಾಲಿಗೆ ಇದೀಗ ಪಾಕಿಸ್ತಾನದ ಮಾಜಿ ನಾಯಕ ಸರ್ಫಾರಾಜ್ ಅಹ್ಮದ್ ಸೇರಿದ್ದು, ಹೈವೋಲ್ಟೇಜ್ ಮ್ಯಾಚ್ ನಲ್ಲಿ ಗೆಲುವು ನಮ್ಮದೇ ಎಂದಿದ್ದಾರೆ.
ಮೆಗಾ ಟೂರ್ನಿಯಲ್ಲಿ ಯಾವುದೇ ತಂಡವಾಗಿದ್ದರೂ ಮೊದಲ ಮ್ಯಾಚ್ ನಲ್ಲಿ ಗೆದ್ದು ಶುಭಾರಂಭ ಮಾಡಲು ಬಯಸುತ್ತದೆ.

ಏಷ್ಯಾಕಪ್ ಭಾಗವಾಗಿ ನಮ್ಮ ತಂಡ ಮೊದಲ ಮ್ಯಾಚ್ ನಲ್ಲಿ ಭಾರತ ತಂಡವನ್ನು ಎದುರಿಸಲಿದೆ.
ಈ ಮ್ಯಾಚ್ ನಲ್ಲಿ ನಾವು ಪೂರ್ತಿ ವಿಶ್ವಾಸದೊಂದಿಗೆ ಮೈದಾನಕ್ಕೆ ಇಳಿಯುತ್ತೇವೆ. ಯಾಕೆಂದರೇ ನಾವು ಕಳೆದ ವರ್ಷ ಇದೇ ಮೈದಾನದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ದೇವು.
ಯುಎಇ ಪಿಚ್ ಬಗ್ಗೆ ಪಾಕ್ ತಂಡಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ನಾವಿಲ್ಲಿ ಅನೇಕ ಪಂದ್ಯಗಳನ್ನಾಡಿದ್ದೇವೆ. ಆದ್ದರಿಂದ ನಾವು ಈ ಪಂದ್ಯದಲ್ಲಿ ಗೆಲುವು ಸಾಧಿಸೇ ತೀರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.








