ಬೆಂಗಳೂರು: ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದು, ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 4 ವರ್ಷಗಳ ಜೈಲು ಶಿಕ್ಷೆ ಪೂರೈಸುವ ವೇಳೆ ಶಶಿಕಲಾಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ಚಿಕಿತ್ಸೆ ಬಳಿಕ ಇಂದು ಡಿಶ್ಚಾರ್ಜ್ ಆಗಿರುವ ಶಶಿಕಲಾ, ನೇರವಾಗಿ ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್‍ಗೆ ತೆರಳಿದ್ದಾರೆ.
ದೇವನಹಳ್ಳಿ ಬಳಿ ಇರುವ ಪ್ರೇಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‍ನಲ್ಲಿರುವ ಆಪ್ತರ ಮನೆಗೆ ತೆರಳಿರುವ ಶಶಿಕಲಾ, ಫೆ.10ರವರೆಗೂ ಅಲ್ಲಿಯೇ ಇರಲಿದ್ದಾರೆ. ಫೆಬ್ರವರಿ 11ರಂದು ತಮಿಳುನಾಡಿಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಚಿನ್ನಮ್ಮ ನಿರ್ಧರಿಸಿದ್ದಾರೆ.
ಶಶಿಕಲಾ ಡಿಶ್ಚಾರ್ಜ್ ಹೊತ್ತಿಗೆ ವಿಕ್ಟೋರಿಯಾ ಆಸ್ಪತ್ರೆ ಬಳಿ 10 ಮಂದಿ ಖಾಸಗಿ ಭದ್ರತಾ ಪಡೆ(ಎಸ್ಕಾರ್ಟ್) ಸಜ್ಜಾಗಿ ನಿಂತಿತ್ತು. ವೀಲ್ ಚೇರ್‍ನಲ್ಲಿ ಆಸ್ಪತ್ರೆಯಿಂದ ಹೊರ ಬಂದ ಶಶಿಕಲಾ, ಅಭಿಮಾನಿಗಳು, ಬೆಂಬಲಿಗರ ಕಡೆ ಕೈಬೀಸಿ ಖಾಸಗಿ ಭದ್ರತಾ ಸಿಬ್ಬಂದಿ ಕಾವಲಿನಲ್ಲಿ ತೆರಳಿದರು. ಆಸ್ಪತ್ರೆ ಬಳಿ ಬೆಳಿಗ್ಗೆಯಿಂದಲೇ ಜಮಾಯಿಸಿದ್ದ ಅಭಿಮಾನಿಗಳು ಚಿನ್ನಮ್ಮಗೆ ಜೈಕಾರ ಕೂಗಿ ಅಭಿನಂದಿಸಿದರು.
ಕೊರೊನಾದಿಂದ ಗುಣಮುಖರಾಗಿ ಡಿಶ್ಚಾರ್ಜ್ ಆದ ಬಳಿಕ 7 ದಿನ ಅಥವಾ 14 ದಿನ ಹೋಂಕ್ವಾರಂಟೈನ್‍ನಲ್ಲಿರುವಂತೆ ವೈದ್ಯೂರು ಶಶಿಕಲಾಗೆ ಸೂಚಿಸಿದ್ದಾರೆ. ಹೀಗಾಗಿಯೇ ಆಸ್ಪತ್ರೆಯಿಂದ ನೇರವಾಗಿ ಮೆರವಣಿಗೆ ಮೂಲಕ ತೆರಳದೆ ಒಂದು ವಾರ ವಿಶ್ರಾಂತಿ ಪಡೆಯಲಿದ್ದಾರೆ.
ಫೆ.10ಕ್ಕೆ ಅಮವಾಸ್ಯೆ ಮುಗಿದ ಬಳಿಕ ಫೆ.11ರಿಂದ ಮಾಘಮಾಸ ಆರಂಭವಾಗಲಿದೆ. ಫೆ.11ರಂದು ಹೊಸೂರಿನಿಂದ ಭರ್ಜರಿ ರೋಡ್ ಶೋ ಮೂಲಕ ಚೆನ್ನೈಗೆ ಶಶಿಕಲಾ ಗ್ರಾಂಡ್ ಎಂಟ್ರಿ ಕೊಡಲಿದ್ದಾರೆ.
ಇಂದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲು ಕೂಡ ಜ್ಯೋತಿಷಿಗಳು ಹೇಳಿದ ಮುಹೂರ್ತದಂತೆಯೇ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಅದೇ ರೀತಿ ತಮಿಳುನಾಡಿಗೆ ಜ್ಯೋತಿಷಿಗಳ ಸಲಹೆಯಂತೆ ಮಾಘಮಾಸ ಆರಂಭದ ದಿನದಂದೇ ತೆರಳಿದ್ದಾರೆ ಎಂದು ಆಪ್ತರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel