ಗೆಳೆಯನ ಕಳೆದುಕೊಂಡ ದುಃಖದಲ್ಲಿ ಹುಟ್ಟುಹಬ್ಬ ಆಚರಿಸಿಇಕೊಳ್ಳುವುದಿಲ್ಲ ಎಂದ ಸತೀಶ್ ನಿನಾಸಂ
ಇತ್ತೀಚೆಗೆ ಅಪಘಾತದಲ್ಲಿ ಜೀವ ಕಳೆದುಕೊಂಡ ನಟ ಸಂಚಾರಿ ವಿಜಯ್ ಅವರ ಅಗಲಿಕೆ ಸ್ಯಾಂಡಲ್ ವುಡ್ ದೊಡ್ಡ ಆಘತವನ್ನೇ ಉಂಟು ಮಾಡಿದೆ.. ಅದ್ರಲ್ಲೂ ಅವರ ತೀರಾ ಆಪ್ತರಾಗಿದ್ದ ನಟ ನೀನಾಸಂ ತೀರ ದುಃಖದಲ್ಲಿದ್ದಾರೆ. ಸತೀಶ್ ಹಾಗೂ ಸಂಚಾರಿ ವಿಜಯ್ ಆಪ್ತ ಗೆಳೆಯರಾಗಿದ್ದರು. ತನ್ನ ಆಪ್ತ ಮಿತ್ರನನ್ನ ಕಳೆದುಕೊಂಡಿರುವ ನೋವಿನಿಂದ ಇನ್ನೂ ಹೊರಬಾರಲು ಸಾಧ್ಯವಾಗದ ನಿನಾಸಂ ಜೂನ್ 20ರಂದು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ..
‘ಗೆಳೆಯರೇ ಇದೇ 20 ನನ್ನ ಹುಟ್ಟು ಹಬ್ಬ ,ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ.ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರಿವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡ ಮುಂದೂಡಿದ್ದೇವೆ’ ಎಂದು ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಸಂಚಾರಿ ವಿಜಯ್ ಜೂನ್ 12 ರಂದು ಜೆಪಿ ನಗರ 7ನೇ ಹಂತದ ಬಳಿ ಅಪಘಾತಕ್ಕೆ ಈಡಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಕಾರಣ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯರು ಕೈಚೆಲ್ಲಿದರು. ಮೆದುಳು ನಿಷ್ಕ್ರಿಯಗೊಂಡಿತ್ತು.. ಜೂನ್ 15ರಂದು ಅವರು ನಿಧನ ಹೊಂದಿದ್ದಾರೆಂದು ಘೋಷಿಸಲಾಗಿತ್ತು. ಅಭಿಮಾನಿಗಳು , ಸ್ಯಾಂಡಲ್ ವುಡ್ ತಾರೆಯರು , ರಾಜಕೀಯ ನಾಯಕರು ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








