ಬೆಲೆ ಏರಿಕೆ ತಡೆಯಲು ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು : ಸತೀಶ್ ಜಾರಕಿಹೊಳಿ SATISH JARAKIHOLI
ಬೆಳಗಾವಿ : ಬೆಲೆ ಏರಿಕೆ ತಡೆಯಲು ಕೇಂದ್ರ, ರಾಜ್ಯದಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಚುನಾವನೆ ಹಿನ್ನೆಲೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಸತೀಶ್ ಜಾರಕಿಹೊಳಿ ಪ್ರಚಾರ ನಡೆಸಿದರು. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿ ಅವರು, ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ತಡೆಯಲು ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ದೇಶದಲ್ಲಿ ಅದಾನಿಗಾಗಲಿ, ಅಂಬಾನಿಗಾಗಲಿ ಸರ್ಕಾರ ಇರಬಾರದು. ರೈತರು, ದಲಿತರು, ಹಿಂದುಳಿದವರು, ಜನರ ಪರ ಸರ್ಕಾರವಿರಬೇಕು.
ಆದ್ರೆ ಕೇಂದ್ರ ಸರ್ಕಾರ ಕೇವಲ ಎರಡ್ಮೂರು ಜನರಿಗಾಗಿ ನಡೀತಿದೆ. ಇದನ್ನ ತಡೆಯಲು ಈ ಚುನಾವಣೆ ಮೂಲಕ ಸರ್ಕಾರಕ್ಕೆ ಉತ್ತರಿಸಬೇಕು.
ಜನವಿರೋಧಿ ನೀತಿ ಅನುಸರಿಸಿದರೆ ಜನ ತಕ್ಕ ಉತ್ತರ ನೀಡ್ತಾರೆ ಎಂಬ ಸಂದೇಶವನ್ನು ಈ ಚುನಾವಣೆ ಮೂಲಕ ಸಾರಬೇಕಿದೆ ಎಂದು ಕರೆಕೊಟ್ಟರು.
ಇದೇ ವೇಳೆ ಮತದ ಮಹತ್ವ ತಿಳಿಸಿದ ಸತೀಶ್ ಜಾರಕಿಹೊಳಿ, ಪ್ರತಿ ಮತವು ಬಹಳ ಬೆಲೆಯುಳ್ಳದ್ದಾಗಿದೆ.
ಯಾವುದೇ ಸರ್ಕಾರ ಬೀಳಿಸುವ, ತರುವ ಶಕ್ತಿ ಒಂದು ಮತಕ್ಕಿದೆ. ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ರೈತರು ಪ್ರತಿಭಟಿಸುತ್ತಿದ್ದಾರೆ.
ಆದರೆ, ಸೆಲೆಬ್ರಿಟಿಗಳ ಬರ್ತ್ ಡೇ ಗೆ ವಿಷ್ ಮಾಡಲು ಸಮಯವಿರುವ ಮೋದಿಗೆ ರೈತರನ್ನ ಭೇಟಿಯಾಗಲು ಸಮಯವಿಲ್ಲ ಎಂದು ಟೀಕಿಸಿದರು.
