Satish Jarkiholi | ಚಿಕ್ಕ ರಾಜ್ಯಗಳಾದ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು
1 min read
Satish Jarkiholi | ಚಿಕ್ಕ ರಾಜ್ಯಗಳಾದ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು
ಬೆಳಗಾವಿ : ಚಿಕ್ಕ ರಾಜ್ಯಗಳಾದ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ಧಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಗ್ಗೆ ಸಚಿವ ಉಮೇಶ್ ಕತ್ತಿ ಪುನರುಚ್ಛಾರದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಮೂರು ಕೋಟಿ ಜನಸಂಖ್ಯೆ ಇದ್ದಲ್ಲಿ ಎರಡು ರಾಜ್ಯ ಮಾಡಲು ಮಸೂದೆ ತರಲು ಬಿಜೆಪಿ ಪ್ಲ್ಯಾನ್ ಇದ್ದು, ಚಿಂತನೆ ನಡೀತಿದೆ.
ಈ ಕಾನೂನು ತಂದರೆ ಆಟೋಮೇಟಿಕ್ ಆಗಿ ಎರಡು ರಾಜ್ಯಗಳಾಗುತ್ತವೆ. ಹಿಂದೆ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದ್ರು ಎಂದರು.

ಇದೇ ವೇಳೆ ಚಿಕ್ಕ ರಾಜ್ಯಗಳಾದ್ರೆ ಅಭಿವೃದ್ಧಿ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಚಿಕ್ಕ ರಾಜ್ಯಗಳಾದ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು.
ಇಲ್ಲಿ ಪ್ರತ್ಯೇಕ ಅನ್ನೋ ಪ್ರಶ್ನೆ ಇಲ್ಲ ಅವರು ಕಾನೂನು ತರುತ್ತಿದ್ದಾರೆ. ಪ್ರತ್ಯೇಕ ರಾಜ್ಯವೆನ್ನುವ ಪ್ರಶ್ನೆ ಬೇರೆ, ಹೋರಾಟ ಮಾಡಿ ಪಡೆಯೋದು ಬೇರೆ.
ತೆಲಂಗಾಣ ಹೇಗೆ ಹೋರಾಟ ಮಾಡಿ ಪಡೆದ್ರು, ಹಾಗೇ ಹೋರಾಟ ಅಲ್ಲ ಇದು. ಇದು ಹೋರಾಟ ಅಲ್ಲ, ಕಾನೂನನ್ನೇ ತರುತ್ತಿದ್ದಾರೆ.
ಪ್ರತ್ಯೇಕ ರಾಜ್ಯ ಮಾಡಬೇಕೆಂಬುದು ಬಿಜೆಪಿ ಅಜೆಂಡಾದಲ್ಲಿದೆ. ಆ ಕಾನೂನು ಬಂದಾಗ ಚರ್ಚೆ ಮಾಡೋಣ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.