ಹುಬ್ಬಳ್ಳಿ : ಬೆಳಗಾವಿ(Belagavi) ಯಲ್ಲಿ ಬಣ ರಾಜಕೀಯ ಹೆಚ್ಚಾಗಿದ್ದು, ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಮಧ್ಯೆ ಬಿಗ್ ಫೈಟ್ ನಡೆದಿದೆ. ಸದ್ಯ ಈ ಬಣ ರಾಜಕೀಯ ಹುಬ್ಬಳ್ಳಿ(Hubballiಗೆ ಶಿಫ್ಟ್ ಆಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಲಕ್ಷ್ಮಣ ಸವದಿ (Laxman Savadi) ಸೇರಿದಂತೆ ಹಲವರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಹುಬ್ಬಳ್ಳಿಯ ಕ್ಯೂಬಿಕ್ಸ್ ಹೋಟೆಲ್ನಲ್ಲಿ ಬಿಜೆಪಿ ನಾಯಕರ ಸೀಕ್ರೆಟ್ ಸಭೆ ನಡೆಯಿತು. ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ರಮೇಶ್, ಮಹೇಶ್ ಕುಮಟಳ್ಳಿ ಟಿಕೆಟ್ಗಾಗಿ ಸಾಹುಕಾರ್ ರಮೇಶ ಜಾರಕಿಹೊಳಿ ಪಟ್ಟು ಹಿಡಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುನಿಸು ಅಂತ್ಯ ಮಾಡುವ ಪ್ರಯತ್ನ ಮಾಡಿದರು.
ಸಭೆ ಮುಗಿದ ನಂತರ ಒಂದೇ ವಾಹನದಲ್ಲಿ ಜೋಶಿ, ಸಾಹುಕಾರ್, ಸವದಿ ವಿಮಾನ ನಿಲ್ದಾಣದಕ್ಕೆ ತೆರಳಿದ್ದು, ಮೂವರು ಒಟ್ಟಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಎಲ್ಲ ಪಕ್ಷಗಳಲ್ಲಿಯೂ ಬಣ ರಾಜಕೀಯ ಜೋರಾಗಿದೆ. ಇದು ಪಕ್ಷಗಳ ಹೈಕಮಾಂಡ್ಗೆ ತಲೆನೋವು ತಂದಿದೆ. ಬಣ ರಾಜಕಾರಣ ಶಮನಕ್ಕೆ ಕಸರತ್ತು ನಡೆಸಲಾಗುತ್ತಿದೆ.








