ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಸ್ ಬಂದ್ 3ನೇ ದಿನ: 4 ನಿಗಮಗಳ ನೌಕರರ ಜತೆ ಸವದಿ ಮೀಟಿಂಗ್..!

Kariyappa N by Kariyappa N
December 13, 2020
in Newsbeat, Politics, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳ 1.40ಲಕ್ಷಕ್ಕೂ ಹೆಚ್ಚು ನೌಕರರು ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ತಮ್ಮ ಬೇಡಿಕೆ ಈಡೇರದ ಹೊರತು ಮುಷ್ಕರ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸರ್ಕಾರಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಟ ಮುಂದುವರೆದಿದ್ದು, ಪೊಲೀಸ್ ಭದ್ರತೆಯಲ್ಲಿ ಕೆಲ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ನಡೆಸಲಾಗುತ್ತಿದೆ. ಆದರೂ, ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಮಾಡಿದರೆ ಉಳಿದ 40ಕ್ಕೂ ಹೆಚ್ಚು ನಿಗಮಗಳ ನೌಕರರು ಸಹ ಇದೇ ಬೇಡಿಕೆ ಮುಂದಿಡುತ್ತಾರೆ. ಸರ್ಕಾರಕ್ಕೆ 6000 ಕೋಟಿಗೂ ಹೆಚ್ಚು ಆರ್ಥಿಕ ಹೊರೆ ಬೀಳುತ್ತದೆ. ಹೀಗಾಗಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಸಾರಿಗೆ ನೌಕರರು ತಮ್ಮ ಬಿಗಿಪಟ್ಟು ಮಾತ್ರ ಸಡಿಲಿಸಿಲ್ಲ.

ಕೆಲವೇ ಹೊತ್ತಲ್ಲಿ ಸವದಿ ಮೀಟಿಂಗ್
ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಸಾರಿಗೆ ನೌಕರರ ಜತೆ ಸಭೆ ನಡೆಯಲಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರ ಸಂಘದ ಪದಾಧಿಕಾರಿಗಳು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Related posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

June 17, 2026
ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

June 17, 2026


ಶುಕ್ರವಾರ ನಡೆದ ಸಭೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೌಕರರ ಬೇಡಿಕೆಗಳಿಗೆ ಯಾವುದೇ ಭರವಸೆ ನೀಡದ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ಮುಂದುವರೆಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ನಾಳೆಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸವದಿ ನೌಕರರ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಸರ್ಕಾರ ತನ್ನ ಬಿಗಿಪಟ್ಟು ಮುಂದುವರೆಸುವುದೋ ಅಥವಾ ನೌಕರರು ಮುಷ್ಕರ ವಾಪಸ್ ಪಡೆಯಲು ಸಮ್ಮತಿಸುತ್ತಾರೋ ಎಂಬುದು ನಿರ್ಧಾರವಾಗಲಿದೆ.
ಇದೇ ವೇಳೆ, ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಫ್ರೀಡಂಪಾರ್ಕ್‍ನಲ್ಲಿ ಸಾರಿಗೆ ಇಲಾಖೆಗಳ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದಾರೆ.

ಖಾಸಗಿ ಬಸ್, ಆಟೋಗಳ ದರ್ಬಾರ್..?
ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್‍ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಹೀಗಾಗಿ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರ ಸುಲಿಗೆಗೆ ನಿಂತಿದ್ದಾರೆ. ಎರಡು ಪಟ್ಟು ಮಾತ್ರವಲ್ಲ, ನಾಲೈದು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಕಡಿವಾಣ ಹಾಕಬೇಕಾದ ಆರ್‍ಟಿಒ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಪ್ರಯಾಣಿಕರು ಅರೋಪಿಸಿದ್ದಾರೆ.
ಇನ್ನು ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲೂ ಆಟೋ ಚಾಲಕರು ಕೂಡ ಪ್ರಯಾಣಿಕರಿಂದ ವಸೂಲಿಗೆ ನಿಂತಿದ್ದಾರೆ. ಬೇಕಾಬಿಟ್ಟಿ ದರ ಹೇಳಿ ಪ್ರಯಾಣಿಕರನ್ನು ಸುಲಿಗೆಗೆ ನಿಂತಿರುವ ಆಟೋ ಚಾಲಕರ ವಿರುದ್ಧ ಪ್ರಯಾಣಿಕರು ನಿತ್ಯ ಗಲಾಟೆ ನಡೆಸುತ್ತಿರುವ ಸ್ಥಿತಿ ಸಾಮಾನ್ಯವಾಗಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: 4 corporationsLaxman Sawadimeeting with transport employeesstriketransport employes
ShareTweetSendShare
Join us on:

Related Posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

by admin
June 17, 2026
0

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

by Shwetha
June 17, 2026
0

ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳ ಹೆಸರನ್ನು ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪೊಲೀಸ್...

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

by Shwetha
June 17, 2026
0

ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

RSS ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ; ಪಾರದರ್ಶಕತೆ ಕುರಿತು ಮಹತ್ವದ ಹೇಳಿಕೆ

by Shwetha
June 17, 2026
0

ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಯಾವುದೇ ಸಂಘ-ಸಂಸ್ಥೆ ದೇಶದ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram