ಐಪಿಎಲ್ 2020 ರ ಹದಿಮೂರನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆ
ದುಬೈ, ಸೆಪ್ಟೆಂಬರ್06: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಹದಿಮೂರನೇ ಆವೃತ್ತಿಯ ಬಹುನಿರೀಕ್ಷಿತ ವೇಳಾಪಟ್ಟಿಯನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಬಿಡುಗಡೆಯಾದ ಪಂದ್ಯಗಳ ವೇಳಾಪಟ್ಟಿ ಪ್ರಕಾರ, ಐಪಿಎಲ್ 13 ರ ಆರಂಭಿಕ ಮುಖಾಮುಖಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಜೊತೆ ನಡೆಯಲಿದ್ದು, ಹದಿಮೂರನೆಯ ಆವೃತ್ತಿ ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ನಡೆಯಲಿದೆ.
ಐಪಿಎಲ್ನ ಹದಿಮೂರನೇ ಆವೃತ್ತಿ ಯು ಅಬುಧಾಬಿ, ದುಬೈ, ಮತ್ತು ಶಾರ್ಜಾ ದಲ್ಲಿ 56 ದಿನಗಳ ಕಾಲ ನಡೆಯಲಿದೆ. ಎಂಟು ತಂಡಗಳು ಐಪಿಎಲ್ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಒಟ್ಟಾರೆಯಾಗಿ, ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 10ರಂದು ನಡೆಯಲಿದೆ.
ಪ್ಲೇಆಫ್ ಮತ್ತು ಡ್ರೀಮ್ 11 ಐಪಿಎಲ್ 2020 ಫೈನಲ್ ಪಂದ್ಯಗಳ ಸ್ಥಳಗಳನ್ನು ನಂತರ ಪ್ರಕಟಿಸಲಾಗುವುದು.
ಎಲ್ಲಾ ಎಂಟು ಫ್ರಾಂಚೈಸಿಗಳು ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭಾರತದಲ್ಲಿನ ಆಯಾ ಶಿಬಿರಗಳು ಮತ್ತು ನೆಲೆಗಳಲ್ಲಿ ಸಂಪೂರ್ಣ ಪರೀಕ್ಷೆ ಮತ್ತು ಕ್ವಾರಂಟೈನ್ ಪ್ರೋಟೋಕಾಲ್ ಗಳಿಗೆ ಒಳಪಟ್ಟ ಬಳಿಕ ಬಂದು ತಲುಪಿದೆ.
ಏತನ್ಮಧ್ಯೆ, ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ಗಾಗಿ ಬಿಸಿಸಿಐ ಏಳು ಭಾರತೀಯ ಕಾಮೆಂಟ್ರಿಗಾರರನ್ನು ಆಯ್ಕೆ ಮಾಡಿದೆ. ವರದಿಯ ಪ್ರಕಾರ, ಸುನಿಲ್ ಗವಾಸ್ಕರ್, ಎಲ್ ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್, ದೀಪ್ ದಾಸ್ಗುಪ್ತಾ, ಅಂಜುಮ್ ಚೋಪ್ರಾ, ರೋಹನ್ ಗವಾಸ್ಕರ್, ಮತ್ತು ಹರ್ಷ ಭೋಗ್ಲೆ ಸೇರಿದಂತೆ ಏಳು ಕಾಮೆಂಟ್ರಿಗಾರರು ಸೆಪ್ಟೆಂಬರ್ 10 ರಂದು ಯುಎಇಗೆ ತೆರಳಲಿದ್ದಾರೆ.
IPL 2020 schedule pic.twitter.com/spq2TA9D6P
— Saakshatv-videos (@Saakshatv_video) September 6, 2020