“5ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್”
ಅಮೆರಿಕಾ : ಅಮೆರಿಕಾದ ಚಿಕಾಗೊದಲ್ಲಿನ ಪಬ್ಲಿಕ್ ಸ್ಕೂಲ್ಸ್ ಬೋರ್ಡ್ ತನ್ನ ಅಧೀನದ ಪ್ರೌಢ ಶಾಲೆಗಳಲ್ಲಿ ಕಾಂಡೋಮ್ ಯೋಜನೆ ಜಾರಿಗೊಳಿಸಿದೆ. ಅಲ್ಲದೇ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿಯೇ ಉಚಿತವಾಗಿ ಕಾಂಡೋಮ್ ನೀಡಿ ಪ್ರೋ ತ್ಸಾಹಿಸಲಾಗುತ್ತಿದೆ. ಸಾಲೆಯ ಈ ನಡೆಗೆ ಮಕ್ಕಳ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನರ್ಸರಿಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಯಿಂದ ಹೊರ ಉಳಿದಿದ್ದು, ಐದನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕಾಂಡೋಮ್ ಒದಗಿಸಲಾಗುತ್ತಿದೆ. ಇದಕ್ಕೆ ಸಮಜಾಯಿಸಿ ನೀಡಿರುವ ಸಿಪಿಎಸ್, ಉತ್ತಮ ಲೈಂಗಿಕ ಶಿಕ್ಷಣವು ಆರಂಭದಲ್ಲಿಯೇ ದೊರೆಯಬೇಕು. ಅದರಿಂದ ಅಕಾಲಿಕ ಸಂತಾನ ಮತ್ತು ಲೈಂಗಿಕ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ.
ಗಂಟೆಗೆ 16 ಲಕ್ಷ ಕಿ.ಮೀ ವೇಗದಲ್ಲಿ ಬರ್ತಿದೆ ಸೌರ ತೂಫಾನ್
ಕಳೆದ ಡಿಸೆಂಬರ್‍ನಲ್ಲಿಯೇ ಚಿಕಾಗೊ ಪಬ್ಲಿಕ್ ಸ್ಕೂಲ್ ಬೋರ್ಡ್ ಈ ವಿಚಿತ್ರ ಯೋಜನೆ ಸಿದ್ಧಪಡಿಸಿ ಕೆಲವು ಶಾಲೆಗಳಲ್ಲಿ ಜಾರಿಗೆ ಕೂಡ ತಂದಿದೆ. ನಗರದ 600ಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಕಾಂಡೋಮ್ ಭಾಗ್ಯ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯೇ ಕಾಂಡೋಮ್ ವೆಚ್ಚ ಭರಿಸುತ್ತಿದ್ದು, ಮಂಡಳಿಗೆ ಯಾವುದೇ ನಷ್ಟವಿಲ್ಲ. ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ನೀಡುವುದಷ್ಟೆ ನಮ್ಮ ಕೆಲಸ. ಇದು ತಪ್ಪು ಎಂದು ಕೆಲವರು ಟೀಕಿಸುತ್ತಿದ್ದಾರೆ.
ಚೀನಾ ಕಂಪನಿಗಳನ್ನ ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕಾ – ಸೇಡು ತೀರಿಸಿಕೊಳ್ಳೋದಾಗಿ ಎಚ್ಚರಿಸಿದ ಚೀನಾ
ಈ ಬಗ್ಗೆ ಸಿಪಿಎಸ್ ವೈದ್ಯ ಕೆನೆತ್ ಫಾಕ್ಸ್ ಪ್ರತಿಕ್ರಿಯಿಸಿ, ಮಕ್ಕಳು ಏನೂ ತಿಳಿಯದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ದೊಡ್ಡ ಅನಾಹುತ ಆಗುತ್ತದೆ. ಹದಿಹರೆಯದಲ್ಲೆ ಗರ್ಭ ಧರಿಸುವ ಅಪಾಯ ಹೆಚ್ಚಿದೆ. ಇದರಿಂದ ಸಮಾಜದಲ್ಲಿ ಅಕ್ರಮ ಸಂತಾನ ಹೆಚ್ಚಿ ಅನಾಥ ಮಕ್ಕಳು ಹೆಚ್ಚಾಗುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಎಚ್‍ಐವಿಯಂತಹ ಅಪಾಯಕಾರಿ ಲೈಂಗಿಕ ರೋಗಗಳೂ ಕಾಣಿಸಿ ಸಮಸ್ಯೆ ಸೃಷ್ಟಿಯಾಗುತ್ತದೆ. ಇದಕ್ಕೆಲ್ಲ ಕಾಂಡೋಮ್ ಉತ್ತಮ ಪರಿಹಾರ ಎಂದು ಹೇಳಿದ್ದಾರೆ. ಇತ್ತ ಪ್ರೌಢ ಶಾಲೆಯೊಂದಕ್ಕೆ ತಿಂಗಳಿಗೆ 250, ಹೈಸ್ಕೂಲ್‍ಗೆ 1,000 ಕಾಂಡೋಮ್‍ಗಳನ್ನು ನೇರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.