ಶಿಕ್ಷಕರ ದಿನದಂದು ಆಂಧ್ರಪ್ರದೇಶದಲ್ಲಿ ಶಾಲೆ ಪುನರಾರಂಭ
ಅಮರಾವತಿ, ಅಗಸ್ಟ್ 2: ಆಂಧ್ರಪ್ರದೇಶದಲ್ಲಿ ಶಾಲೆಗಳನ್ನು ಸೆಪ್ಟೆಂಬರ್ ನಿಂದ ಮತ್ತೆ ತೆರೆಯಲಾಗುವುದು. ಸರ್ಕಾರದ ನಿರ್ಧಾರದಂತೆ ಶಿಕ್ಷಕರ ದಿನದಂದು ಅಂದರೆ ಸೆಪ್ಟೆಂಬರ್ 5 ರಂದು ಶಾಲೆಗಳನ್ನು ಮತ್ತೆ ತೆರೆಯಲಾಗುವುದು.
ಸೆಪ್ಟೆಂಬರ್ 5 ರಿಂದ ಶಾಲೆ ಪುನರಾರಂಭಕ್ಕೆ ಸಿದ್ಧರಾಗಿ ಎಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವೈಎಸ್ಆರ್ ಶಾಲಾ ಪುನರಾರಂಭಕ್ಕೆ ಒಂದೇ ದಿನ ಮೊದಲೇ ತಯಾರಿ ನಡೆಸಬೇಕೆಂದು ಅವರು ಅಧಿಕಾರಿಗಳನ್ನು ಸೂಚನೆ ನೀಡಿದ್ದು, ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪಠ್ಯ ಮತ್ತು ನೋಟ್-ಬುಕ್ ಗಳ ಕಿಟ್, ಮೂರು ಜೋಡಿ ಸಮವಸ್ತ್ರ ಬಟ್ಟೆ, ಒಂದು ಜೋಡಿ ಬೂಟುಗಳು, ಎರಡು ಜೋಡಿ ಸಾಕ್ಸ್ ಮತ್ತು ಬೆಲ್ಟ್ ನೀಡಲಾಗುವುದು ಎಂದು ಹೇಳಿದ್ದಾರೆ.
ಕಿಟ್‌ನಲ್ಲಿ ಮಾಸ್ಕ್ ಗಳನ್ನು ಕೂಡ ಸೇರಿಸಬೇಕು ಮತ್ತು ಮಾಸ್ಕ್ ಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.