ಶಾಲೆಯಲ್ಲಿ ದುಷ್ಕರ್ಮಿಯೊಬ್ಬಾತ ಗುಂಡಿನ ದಾಳಿ ನಡೆಸಿದ್ದು, ವಿದ್ಯಾರ್ಥಿ ಬಲಿಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಅಯೋವಾ ನಗರದಲ್ಲಿನ ಶಾಲೆಯಲ್ಲಿಯೇ ಗುಂಡಿನ ದಾಳಿ (Iowa School Shootout) ದಾಳಿ ನಡೆದಿದ್ದು, ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿ ನಡೆಸಿದ ನಂತರ ಆರೋಪಿ 17 ವರ್ಷದ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಚಳಿಗಾಲದ ರಜೆ ಮುಗಿದು ತರಗತಿಗಳು ಆರಂಭವಾದ ಮೊದಲ ದಿನವೇ ಯುವಕನೊಬ್ಬ ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಈ ದಾಳಿಯಲ್ಲಿ 6ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಸ್ಥಳೀಯ ಪೆರ್ರಿ ಹೈಸ್ಕೂಲ್‌ನ ವಿದ್ಯಾರ್ಥಿ ಡೈಲನ್ ಬಟ್ಲರ್ ಆರೋಪಿ ಎನ್ನಲಾಗಿದೆ. ಘಟನೆಯ ನಂತರ ಆತನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.








