ಆಗಸ್ಟ್ 23ರಿಂದ 9- 12ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ಆರಂಭ..!
ಬೆಂಗಳೂರು: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಆಗಸ್ಟ್ 23 ರಿಂದ 9 ರಿಂದ 12 ನೇ ತರಗತಿವರೆಗೆ ಶಾಲೆಗಳನ್ನು ಮತ್ತೆ ಪುನರಾರಂಭಿಸಲು ಕರ್ನಾಟಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಈ ಯೋಜನೆ ಉತ್ತಮ ಎನಿಸಿದರೆ 9ನೇ ತರಗತಿಗಳಿಗಿಂತ ಕೆಳಗಿನ ಕ್ಲಾಸ್ ಗಳಿಗೂ ಶಾಲೆಗಳನ್ನ ಪುನರಾಂಭಿಸುವ ಸಾಧ್ಯೆತೆಯಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 9ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾದ ನಂತರ, ಇಲಾಖೆ ಪರಿಸ್ಥಿತಿಯನ್ನು ಪರಿಶೀಲಿಸಲು ಒಂದು ವಾರ ಕಾದು ನಂತರ ಪ್ರಾಥಮಿಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಆರಂಭಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಗಡಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಸ್ಥಳೀಯವಾಗಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲು ಆಯಾ ಅಧಿಕಾರಿಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ಅವರು ಹೇಳಿದರು. ಅದಾಗ್ಯೂ ಸೆಪ್ಟೆಂಬರ್ನಿಂದ ಕೆಳ ಶ್ರೇಣಿಗಳಿಗೆ ತರಗತಿಗಳನ್ನು ಪುನಃ ತೆರೆಯುವ ಕುರಿತು ಇಲಾಖೆಯೊಳಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು. ಆದರೆ, ಶಾಲೆಗಳು ಮತ್ತು ಪೋಷಕರು ತರಗತಿಗಳ ಆರಂಭಕ್ಕೆ ಮನವಿ ಮಾಡಿಕೊಳ್ತಿರುವುದಾಗಿ ತಿಳಿಸಿದ್ರು. ಏತನ್ಮಧ್ಯೆ, ಶಾಲೆಗಳು ಮುಚ್ಚುತ್ತಲೇ ಇದ್ದಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಿಂಜರಿತದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ದೊಡ್ಡ ಶಾಲೆಗಳಿಗೆ ಶಿಫ್ಟ್ ವ್ಯವಸ್ಥೆಯನ್ನು ಪರಿಚಯಿಸಬೇಕು. ವೈಯಕ್ತಿಕ ಹಾಜರಾತಿಯನ್ನು ಪ್ರೋತ್ಸಾಹಿಸಬೇಕು, ಆದರೆ ಕಡ್ಡಾಯಗೊಳಿಸಬಾರದು ಮತ್ತು ದೂರದಿಂದ ಬರುವ ಮಕ್ಕಳಿಗೆ ಅರ್ಥಪೂರ್ಣ ಕಲಿಕಾ ಅವಕಾಶಗಳನ್ನು ಒದಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.