ನಿನ್ ಯೋಗ್ಯತೆಗಷ್ಟು ಬೆಂಕಿ ಹಾಕ : ಪರಸ್ಪರ ಬೈದಾಡಿಕೊಂಡ ಸಂಸದ-ಶಾಸಕ siddeshwar saaksha tv
ತುಮಕೂರು : ಅನುದಾನ ವಿಚಾರವಾಗಿ ತುಮಕೂರು ಸಂಸದ ಬಸವರಾಜ್ ಮತ್ತು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮಧ್ಯೆ ಜಟಾಪಟಿ ನಡೆದಿದೆ.
ಗುಬ್ಬಿ ತಾಲೂಕಿನ ಚೇಳೂರು ಸಮೀಪದ ಸಿ ನಂದಿಹಳ್ಳಿ ಗ್ರಾಮದಲ್ಲಿ ನಡೆದ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಸ್ಟೇಷನ್ ಉದ್ಘಾಟನಾ ಸಭೆಯಲ್ಲಿ ಕೇಂದ್ರ ಸರ್ಕಾರ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ.
ಚೇಳೂರು ಹೋಬಳಿಯಲ್ಲೂ ಆ ಹಣ ಮೀಸಲಿಟ್ಟಿದೆ ಎಂದು ಸಂಸದ ಜಿಎಸ್ ಬಸವರಾಜು ಹೇಳಿದರು.
ಇದರಿಂದ ರೊಚ್ಚಿಗಿದ್ದ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಹೇಳ್ತಿಯಾ, ನಿನ್ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ, ಸುಳ್ಳು ಯಾಕೆ ಬೊಗಳುತ್ತಿ ಎಂದು ಏಕವಚನದಲ್ಲೇ ಗರಂ ಆದರು.
ಅಲ್ಲದೆ ನಿನಗೆ ವಯಸ್ಸಾಗಿದೆ, ಈಗ್ಲಾದರೂ ಸುಳ್ಳು ಹೇಳೋದನ್ನು ನಿಲ್ಲಿಸು ಎಂದು ರೇಗಿದರು.









