ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಹಾಗೂ ತಂಡ ಸಾಕ್ಷ್ಯ ನಾಶ ಮಾಡಲು ಯತ್ನಿಸಿರುವ ವಿಚಾರವೊಂದು ಬೆಳಕಿಗೆ ಬಂದಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ. ದರ್ಶನ್ ಆಂಡ್ ಟೀಂ ಸ್ಕಾರ್ಪಿಯೋ ಕಾರನ್ನು ವಾಶ್ ಮಾಡಿ ಸಾಕ್ಷಿ ನಾಶ ಮಾಡಲು ಯತ್ನಿಸಿದೆ. ಆದರೆ, ಕಾರ್ಪೆಟ್ ನಲ್ಲಿದ್ದ ರಕ್ತದ ಕಲೆ ಸಾಕ್ಷಿ ನೀಡಿದೆ.
ನನಗೇನೂ ಗೊತ್ತಿಲ್ಲ. ಕುರಿ ಸಾಗಿಸಲು ಅಂತ ಕಾರು ಒಯ್ದು ಹೀಗೆ ಹೆಣ ಸಾಗಿಸಿದ್ದಾರೆ ಎಂದು ಪುನೀತ್ ಹೇಳಿದ್ದಾರೆ ಎನ್ನಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ನೀಡುವ ಮುನ್ನ ಕಾರಿನ ಮುಂಭಾಗ ಚಾಲೆಂಜಿಂಗ್ ಸ್ಟಾರ್, ಕಾರಿನ ಹಿಂಭಾಗದ ಗ್ಲಾಸ್ ಮೇಲೆ ದರ್ಶನ್ ಪೋಸ್ಟರ್, ಡಿ ಬಾಸ್ ಎಂದು ಇತ್ತು. ಹೆಣ ಸಾಗಿಸಿದ ನಂತರ ಅವುಗಳನ್ನು ಕಿತ್ತಿದ್ದಾರೆ ಎನ್ನಲಾಗಿದೆ.
ಕಾಮಾಕ್ಷಿಪಾಳ್ಯದ ಮೋರಿ ಬಳಿ ರೇಣುಕಾಸ್ವಾಮಿ ಶವ ಎಸೆದ ಬಳಿಕ ಯಾವುದೇ ಗುರುತು ಸಿಗಬಾರದು ಎಂದು ಕಾರನ್ನು ವಾಶಿಂಗ್ ಸೆಂಟರ್ನಲ್ಲಿ ಹೇಮಂತ್ ತೊಳೆಸಿದ್ದಾನೆ. ಎ7 ಅನುಕುಮಾರ್ ಜೊತೆ ಸ್ನೇಹಿತ ತಬಾರಕ್ ಎಂಬಾತ ಮಾತನಾಡಿದ್ದ ಎನ್ನಲಾಗಿರುವ ಆಡಿಯೋ ಕೂಡ ವೈರಲ್ ಆಗಿದೆ.
ನಾನು ಶೆಡ್ ಒಳಗೆ ಹೋಗಿಲ್ಲ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದೆವು. ನಮ್ಮನ್ನೆಲ್ಲಾ ಶೆಡ್ನಿಂದ ಹೊರಗೆ ನಿಲ್ಲಿಸಿದ್ದರು. ಆನಂತರ ಶೆಡ್ ಒಳಗೆ ಕಾರು ಬಂತು. ನಂತರ ಶೆಡ್ ಬಳಿ ಕರೆದು ಸರೆಂಡರ್ ಆಗ್ತೀರಾ? ದುಡ್ಡು ಕೊಡ್ತೇವೆ ಅಂದ್ರು. ನಾವು ಸರೆಂಡರ್ ಆಗಲ್ಲ ಎಂದು ಮರಳಿ ಬಂದೆವು. ಶೆಡ್ ಒಳಗೆ ಸುಮಾರು 50 ಜನ ಇದ್ದರು’ ಎಂದು ಅನುಕುಮಾರ್ ಹೇಳಿದ್ದಾನೆ ಎನ್ನುವುದು ವೈರಲ್ ಆಗಿದೆ.